ಅಫ್ಘಾನ್: ಸೇನಾ ನೆಲೆಗೆ ದಾಳಿ; 10 ಸೈನಿಕರು ಸಾವು
ಕಾಬೂಲ್ (ಅಫ್ಘಾನಿಸ್ತಾನ), ಮೇ 24: ಅಫ್ಘಾನಿಸ್ತಾನದ ದಕ್ಷಿಣದ ರಾಜ್ಯ ಕಂದಹಾರ್ನಲ್ಲಿ ಸೇನಾ ನೆಲೆಯೊಂದರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಕನಿಷ್ಠ 10 ಅಫ್ಘಾನ್ ಸೈನಿಕರು ಮೃತಪಟ್ಟಿದ್ದಾರೆ ಎಂದು ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯ ಮಂಗಳವಾರ ತಿಳಿಸಿದೆ.
ಶಾ ವಾಲಿ ಕೋಟ್ ಜಿಲ್ಲೆಯಲ್ಲಿ ಸೋಮವಾರ ತಡರಾತ್ರಿ ಈ ದಾಳಿ ನಡೆದಿದೆ. ಇದಕ್ಕೂ ಒಂದು ದಿನ ಮೊದಲು, ನೆರೆಯ ಝಬುಲ್ ಪ್ರಾಂತದಲ್ಲಿರುವ ಪೊಲೀಸ್ ಹೊರಠಾಣೆಗಳ ಮೇಲೆ ತಾಲಿಬಾನ್ ಉಗ್ರರು ದಾಳಿ ನಡೆಸಿ 20 ಅಫ್ಘಾನ್ ಪೊಲೀಸರನ್ನು ಹತ್ಯೆಗೈದಿದ್ದರು.
ಅಮೆರಿಕ ನೇತೃತ್ವದ ಮಿತ್ರಪಡೆಯು 16 ವರ್ಷಗಳ ಹಿಂದೆ ತಾಲಿಬಾನ್ ಸರಕಾರವನ್ನು ಉರುಳಿಸಿದ ಬಳಿಕ, ದೇಶದಲ್ಲಿ ದಿನದಿಂದ ದಿನಕ್ಕೆ ತಾಲಿಬಾನ್ ಶಕ್ತಿಯುತವಾಗಿ ಬೆಳೆಯುತ್ತಿದೆ.
‘‘ಕಳೆದ ರಾತ್ರಿ ಶಾ ವಾಲಿ ಕೋಟ್ ಜಿಲ್ಲೆಯ ಅಚಕ್ಝಾಯಿಯಲ್ಲಿರುವ ಸೇನಾ ಕಾರ್ಪ್ಸ್ 205ರ ಶಿಬಿರದ ಮೇಲೆ ಶತ್ರುಗಳು ದಾಳಿ ನಡೆಸಿದರು’’ ಎಂದು ರಕ್ಷಣಾ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.
Next Story