2.3 ಕೋಟಿ ಅಮೆರಿಕನ್ನರು ಆರೋಗ್ಯ ಯೋಜನೆಯಿಂದ ಹೊರಗೆ
ವಾಶಿಂಗ್ಟನ್, ಮೇ 25: ಅಮೆರಿಕದ ಸಾರ್ವಜನಿಕ ಆರೋಗ್ಯ ರಕ್ಷಣೆ ಕಾರ್ಯಕ್ರಮ ‘ಒಬಾಮ ಕೇರ್’ನ ಸ್ಥಾನದಲ್ಲಿ ಬರಲಿರುವ ಟ್ರಂಪ್ರ ನೂತನ ಆರೋಗ್ಯ ಯೋಜನೆಯ ವ್ಯಾಪ್ತಿಯಿಂದ ಒಂದು ದಶಕದಲ್ಲಿ 2.3 ಕೋಟಿ ಅಮೆರಿಕನ್ನರು ಹೊರಬೀಳುವರು ಎಂದು ಕಾಂಗ್ರೆಶನಲ್ ಬಜೆಟ್ ಆಫಿಸ್ (ಸಿಬಿಒ) ಹೇಳಿದೆ.
ಒಬಾಮ ಕೇರ್ನ ಸ್ಥಾನದಲ್ಲಿ ಬರಲಿರುವ ‘ಅಮೆರಿಕನ್ ಹೆಲ್ತ್ ಕೇರ್ ಕಾಯ್ದೆ’ಯನ್ನು ಈ ತಿಂಗಳ ಆದಿ ಭಾಗದಲ್ಲಿ ರಿಪಬ್ಲಿಕನ್ನರ ಪ್ರಾಬಲ್ಯದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಅಂಗೀಕರಿಸಿದೆ.
ಆದಾಗ್ಯೂ, ಟ್ರಂಪ್ ಕಾಯ್ದೆಯು ಸೆನೆಟ್ನಲ್ಲಿ ಅಂಗೀಕಾರಗೊಳ್ಳಲು ಹಲವು ಅಡ್ಡಿಗಳಿವೆ.
Next Story