ಸ್ಫೋಟದಲ್ಲಿ ಗ್ರೀಸ್ ಮಾಜಿ ಪ್ರಧಾನಿ ಗಾಯ
ಅಥೆನ್ಸ್ (ಗ್ರೀಸ್), ಮೇ 26: ಗ್ರಿಸ್ನ ಮಾಜಿ ಪ್ರಧಾನಿ ಲೂಕಸ್ ಪ್ಯಾಪಡೆಮಸ್ ಅವರ ಕಾರಿನ ಒಳಗೆ ಲಕೋಟೆಯೊಂದರಲ್ಲಿ ಇದ್ದ ಸ್ಫೋಟಕ ಸಾಧನವೊಂದು ಗುರುವಾರ ಸ್ಫೋಟಿಸಿದಾಗ ಅವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಅಥೆನ್ಸ್ನಲ್ಲಿ ನಡೆದ ಘಟನೆಯಲ್ಲಿ ಕಾರಿನ ಚಾಲಕ ಕೂಡ ಗಾಯಗೊಂಡಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅವರ ಗಾಯ ಗಂಭೀರವಾಗಿಲ್ಲವಾದರೂ, ಕಣ್ಣಿಗೆ ಬಹಳಷ್ಟು ಹಾನಿಯಾಗಿದೆ ಎಂದು ವೈದ್ಯರು ಹೇಳಿದ್ದಾರೆ.
Next Story