ಸಿರಿಯ: ವಾಯು ದಾಳಿಯಲ್ಲಿ 50 ನಾಗರಿಕರ ಸಾವು
ಬೆರೂತ್, ಮೇ 26: ಪೂರ್ವ ಸಿರಿಯದ ಅಲ್-ಮಾಯಾದಿನ್ ಪಟ್ಟಣದಲ್ಲಿ ಗುರುವಾರ ಸಂಜೆ ನಡೆದ ವಾಯು ದಾಳಿಯಲ್ಲಿ ಕನಿಷ್ಠ 35 ನಾಗರಿಕರು ಮೃತಪಟ್ಟಿದ್ದಾರೆ ಎಂದು ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ತಿಳಿಸಿದೆ.
ಅಲ್-ಮಾಯಾದಿನ್ ಸಮೀಪ ಐಸಿಸ್ ನೆಲೆಗಳ ಮೇಲೆ ಮೇ 25 ಮತ್ತು 26ರಂದು ದಾಳಿ ನಡೆಸಲಾಗಿದ್ದು, ಫಲಿತಾಂಶವನ್ನು ಎದುರು ನೋಡಲಾಗುತ್ತಿದೆ ಎಂದು ಅಮೆರಿಕ ನೇತೃತ್ವದ ಮಿತ್ರಪಡೆಯ ವಕ್ತಾರರೋರ್ವರು ತಿಳಿಸಿದರು.
ಈ ಪಟ್ಟಣದಲ್ಲಿ ಎರಡು ದಿನಗಳ ಕಾಲ ನಡೆದ ದಾಳಿಯಲ್ಲಿ ಒಟ್ಟು 50 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಬ್ರಿಟನ್ನಲ್ಲಿ ನೆಲೆಸಿರುವ ವೀಕ್ಷಣಾಲಯ ತಿಳಿಸಿದೆ.
Next Story