ಬಾಗ್ದಾದ್ ಮಾರುಕಟ್ಟೆಯಲ್ಲಿ ಆತ್ಮಾಹುತಿ ಬಾಂಬ್ ದಾಳಿ: 21 ಮಂದಿ ಮೃತ್ಯು
ಬಾಗ್ದಾದ್, ಜೂ.9: ಆತ್ಮಾಹುತಿ ಬಾಂಬ್ ದಾಳಿಯೊಂದರಲ್ಲಿ 21ಕ್ಕೂ ಅಧಿಕ ಜನರು ಮೃತಪಟ್ಟು ಹಲವರು ಗಾಯಗೊಂಡ ಘಟನೆ ಬಾಗ್ದಾದ್ ನ ಮಾರುಕಟ್ಟೆಯೊಂದರಲ್ಲಿ ಸಂಭವಿಸಿದೆ.
ರಮಝಾನ್ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಭಾರೀ ಜನಸಂದಣಿಯಿದ್ದು, ಅಲ್ಲಿಗೆ ಆಗಮನಿಸಿದ ಆತ್ಮಾಹುತಿ ಬಾಂಬರ್ ಒಬ್ಬಾಕೆ ತನ್ನನ್ನು ತಾನೇ ಸ್ಫೋಟಿಸಿಕೊಂಡಿದ್ದಾಳೆ. ಪರಿಣಾಮ 21 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದಾಳಿಯ ಹೊಣೆಯನ್ನು ಐಸಿಸ್ ಹೊತ್ತುಕೊಂಡಿದೆ.
Next Story