ಅಮೆರಿಕದಲ್ಲಿ ಅಧ್ಯಾಪಕರಿಗೆ ಬಂದೂಕು ತರಬೇತಿ
ಲಾಸ್ ಏಂಜಲೀಸ್,ಜೂ. 22: ಅತ್ಯವಶ್ಯಕ ಸಂದರ್ಭಗಳಲ್ಲಿ ಬಂದೂಕು ಉಪಯೋಗಿಸಲು ಅಮೆರಿಕದಲ್ಲಿ ಅಧ್ಯಾಪಕರಿಗೆ ತರಬೇತಿ ನೀಡಲಾಗುತ್ತಿದೆ. ಲಾಸ್ ಏಂಜಲೀಸ್ ಕೊಲರಾಡೊ ಸ್ಕೂಲ್ನಲ್ಲಿ ತರಬೇತಿ ಆಯೋಜಿಸಲಾಗಿದ್ದು, 2012ರಲ್ಲಿ ಸಾಂಡಿಹೂಕ್ ಸ್ಕೂಲ್ನಲ್ಲಿ 20 ವಿದ್ಯಾರ್ಥಿಗಳು ಮತ್ತು ಆರು ಅಧ್ಯಾಪಕರು ಗುಂಡಿನ ದಾಳಿಯಲ್ಲಿ ಕೊಲ್ಲಲ್ಪಟ್ಟಿರುವ ಹಿನ್ನೆಲೆಯಲ್ಲಿ ಸ್ಕೂಲ್ ಅಧ್ಯಾಪಕರಿಗೆ ಶಸ್ತ್ರ ತರಬೇತಿಯನ್ನು ಆರಂಭಿಸಲಾಗಿದೆ.
ಶಾಲೆಯಲ್ಲಿ ಗುಂಡುಹಾರಾಟ ಇತ್ಯಾದಿ ನಡೆದಾಗ ಅದಕ್ಕೆ ಹೇಗೆ ಬಂದೂಕಿನಿಂದ ಉತ್ತರ ನೀಡಬೇಕು ಎನ್ನುವುದನ್ನು ಅಧ್ಯಾಪಕರಿಗೆ ಕಲಿಸಿಕೊಡಲಾಗುತ್ತಿದೆ. ಮೂರುದಿವಸಗಳ ಕೋರ್ಸನ್ನು ಅಧ್ಯಾಪಕರಿಗಾಗಿ ಆಯೋಜಿಸಲಾಗಿದೆ.ಜೊತೆಗೆ ಪೊಲೀಸ್ ಅಧಿಕಾರಿಗಳಿಂದ ತರಗತಿ ಏರ್ಪಡಿಸಲಾಗಿದೆ.
Next Story