ಆತ್ಮಾಹುತಿ ಬಾಂಬ್ ದಾಳಿಗೆ 29 ಮಂದಿ ಬಲಿ: 60ಕ್ಕೂ ಅಧಿಕ ಮಂದಿಗೆ ಗಾಯ
ಕಂದಹಾರ್, ಜೂ.22: ಅಫ್ಘಾನಿಸ್ತಾನ್ ಪೊಲೀಸರು ಹಾಗೂ ಸರಕಾರಿ ಅಧಿಕಾರಿಗಳನ್ನು ಗುರಿಯಾಗಿಸಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 29 ಮಂದಿ ಮೃತಪಟ್ಟಿದ್ದಾರೆ.
ಬ್ಯಾಂಕೊಂದರ ಹೊರಗೆ ಈ ದಾಳಿ ನಡೆದಿದ್ದು, ಸರಕಾರಿ ಅಧಿಕಾರಿಗಳು ಸಂಬಳ ತೆಗೆಯುವ ಸಲುವಾಗಿ ಬ್ಯಾಂಕ್ ಗೆ ಬಂದಿದ್ದರು. ಮೃತಪಟ್ಟವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಸೇರಿದ್ದಾರೆ. ಘಟನೆಯಲ್ಲಿ ಸುಮಾರು 60 ಮಂದಿಗೆ ಗಾಯಗಳಾಗಿವೆ ಎಂದು ಇಲ್ಲಿನ ಪ್ರಾಂತ್ಯ ಗವರ್ನರ್ ಹಯಾತುಲ್ಲಾ ಹಯಾತ್ ಹೇಳಿದ್ದಾರೆ.
ಯಾವುದೇ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.
Next Story