ಉದ್ಯೋಗಗಳನ್ನು ಮರಳಿ ತರಲು ಹೋರಾಟ: ಟ್ರಂಪ್
ವಾಶಿಂಗ್ಟನ್, ಜು. 20: ಉತ್ಪಾದಕ ಕೆಲಸಗಳನ್ನು ಮರಳಿ ಅಮೆರಿಕಕ್ಕೆ ತರಲು ಹಾಗೂ ‘ವಂಚಿಸುವ ದೇಶಗಳ’ ವಿರುದ್ಧ ಕ್ರಮ ತೆಗೆದುಕೊಳ್ಳಲು ತನ್ನ ಆಡಳಿತ ಹೋರಾಡುತ್ತಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
‘‘ಅಧಿಕಾರಕ್ಕೆ ಬಂದ ಮೊದಲನೆ ದಿನದಿಂದಲೂ ನನ್ನ ಸರಕಾರ ಉತ್ಪಾದಕ ಕೆಲಸಗಳನ್ನು ಮರಳಿ ತರಲು ಹಾಗೂ ವಂಚಕ ದೇಶಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಹೋರಾಡುತ್ತಿದೆ. ಹೆಚ್ಚಿನ ಕೆಲಸಗಳನ್ನು ಮರಳಿ ಪಡೆದಿದ್ದೇವೆ. ಅಮೆರಿಕದ ಸಂಪತ್ತಿನ ಕಳ್ಳತನವನ್ನು ನಾವು ನಿಲ್ಲಿಸುತ್ತೇವೆ ಹಾಗೂ ನಮ್ಮ ಕಂಪೆನಿಗಳು, ಕಾರ್ಖಾನೆಗಳು ಮತ್ತು ಕಾರ್ಮಿಕರ ಪರವಾಗಿ ನಿಲ್ಲುತ್ತೇವೆ’’ ಎಂದು ಶ್ವೇತಭವನದಲ್ಲಿ ಬುಧವಾರ ನಡೆದ ‘ಮೇಡ್ ಇನ್ ಅಮೆರಿಕ’ ದುಂಡು ಮೇಜಿನ ಸಭೆಯಲ್ಲಿ ಟ್ರಂಪ್ ಹೇಳಿದರು.
Next Story