ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಶಾಹಿದ್ ಖಾಕನ್ ಅಬ್ಬಾಸಿ ಆಯ್ಕೆ
ಇಸ್ಲಾಮಾಬಾದ್, ಆ.1: ಪಾಕ್ ನ ಮಾಜಿ ತೈಲ ಸಚಿವ ಶಾಹಿದ್ ಖಾಕನ್ ಅಬ್ಬಾಸಿಯವರನ್ನು ಪಾಕಿಸ್ತಾನ ಸಂಸತ್ತು ನೂತನ ಪ್ರಧಾನಿಯಾಗಿ ಆಯ್ಕೆ ಮಾಡಿದೆ.
ಆಡಳಿತ ಪಿಎಂಎಲ್-ಎನ್ ಪಕ್ಷದ ಅಬ್ಬಾಸಿಯವರು 342 ಸದಸ್ಯರ ರಾಷ್ಟ್ರೀಯ ಅಸೆಂಬ್ಲಿಯಲ್ಲಿ 221 ಮತಗಳನ್ನು ಗಳಿಸಿದರು. ಫಲಿತಾಂಶ ಪ್ರಕಟಿಸಿದ ನಂತರ ಸ್ಪೀಕರ್ ಅಯಾಝ್ ಸಾದಿಕ್ ಅವರು ಪ್ರಧಾನಿ ಹುದ್ದೆಯನ್ನು ಸ್ವೀಕರಿಸುವಂತೆ ಹಾಗೂ ಸಂಸತ್ತನ್ನು ಉದ್ದೇಶಿಸಿ ಮಾತನಾಡುವಂತೆ ಅಬ್ಬಾಸಿಯವರಿಗೆ ಸೂಚಿಸಿದರು.
Next Story