ಲಡಾಖ್ನಲ್ಲಿ ರಸ್ತೆ ಯೋಜನೆಗೆ ಚೀನಾ ಆಕ್ಷೇಪ
ಬೀಜಿಂಗ್, ಆ. 24: ಸಿಕ್ಕಿಂ ವಲಯದಲ್ಲಿ ಡೋಕಾ ಲಾ ಬಿಕ್ಕಟ್ಟು ಚಾಲ್ತಿಯಲ್ಲಿರುವಂತೆಯೇ, ಲಡಾಖ್ ವಲಯದಲ್ಲಿ ಪ್ಯಾಂಗಾಂಗ್ ಸರೋವರದ ಸಮೀಪ ನೂತನ ರಸ್ತೆ ನಿರ್ಮಿಸುವ ಭಾರತದ ಯೋಜನೆಗೆ ಚೀನಾ ವಿರೋಧ ವ್ಯಕ್ತಪಡಿಸಿದೆ.
ಇನ್ನೂ ನಿಗದಿಯಾಗದ ಗಡಿಯಲ್ಲಿ ರಸ್ತೆ ಯೋಜನೆಯನ್ನು ಕೈಗೆತ್ತಿಕೊಳ್ಳುವ ಮೂಲಕ ಭಾರತ ತನ್ನ ಕೆನ್ನೆಗೆ ತಾನೇ ಹೊಡೆದುಕೊಂಡಿದೆ ಎಂದು ಚೀನಾ ವಿದೇಶ ಸಚಿವಾಲಯ ಹೇಳಿಕೊಂಡಿದೆ.
ಭಾರತದ ಈ ಯೋಜನೆ ಗಡಿಯಲ್ಲಿ 'ಶಾಂತಿ ಮತ್ತು ನೆಮ್ಮದಿಯನ್ನು ಸ್ಥಾಪಿಸುವ' ಪ್ರಯತ್ನಗಳಿಗೆ ಪೂರಕವಾಗಿಲ್ಲ ಎಂದು ಅದು ಅಭಿಪ್ರಾಯಪಟ್ಟಿದೆ.
Next Story