ಬೆಂಗಳೂರು: ಮತದಾನ ಮಾಡಿ ವಾಟ್ಸಾಪ್ ನಲ್ಲಿ ಪೋಟೋ ಹರಿಬಿಟ್ಟ ಮತದಾರ
ಬೆಂಗಳೂರು, ಮೇ 12: ವಿಧಾನಸಭಾ ಚುನಾವಣಾ ಪ್ರಕ್ರಿಯೆ ನಡೆಯುವ ವೇಳೆ ಚುನಾವಣಾ ಸಿಬ್ಬಂದಿ ಕಣ್ಣು ತಪ್ಪಿಸಿ ಮತಯಂತ್ರದಲ್ಲಿ ಮತ ಚಲಾಯಿಸುತ್ತಿರುವ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಘಟನೆ ಯಲಹಂಕ ಕ್ಷೇತ್ರದ ಮತಗಟ್ಟೆಯಲ್ಲಿ ನಡೆದಿದೆ.
ಶನಿವಾರ ಮತದಾನದ ವೇಳೆ ಜೆಡಿಎಸ್ ಅಭ್ಯರ್ಥಿ ಎ.ಎಂ.ಹನುಮಂತೇಗೌಡ ಪರ ಮತ ಚಲಾಯಿಸುತ್ತಿರುವ ಪೋಟೋವನ್ನು ಮತದಾರನೊಬ್ಬ ವಾಟ್ಸಾಪ್ ಗ್ರೂಪ್ಗಳಲ್ಲಿ ಶೇರ್ ಮಾಡಿದ್ದಾನೆ. ಈ ಮೂಲಕ ತಾನು ಜೆಡಿಎಸ್ಗೆ ಮತಚಲಾಯಿಸಿದ್ದೇನೆಂದು ಬಹಿರಂಗವಾಗಿ ಹೇಳಿಕೊಂಡಿದ್ದಾನೆ. ಈ ಪೋಟೊ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.
Next Story