ನಿಯಂತ್ರಣ ತಪ್ಪಿ ಮೋರಿಗಿಳಿದ ಬಿಎಂಟಿಸಿ ಬಸ್
ಬೆಂಗಳೂರು, ಜು.1: ಚಾಲಿಸುತ್ತಿದ್ದ ಬಿಎಂಟಿಸಿ ಬಸ್ಯೊಂದು ನಿಯಂತ್ರಣ ತಪ್ಪಿ ಮೋರಿಯೊಂದಕ್ಕೆ ಇಳಿದ ಘಟನೆ ರವಿವಾರ ನಡೆದಿದೆ.
ನಗರದ ವಿಲ್ಸನ್ಗಾರ್ಡನ್ನ 3ನೆ ಕ್ರಾಸ್ ಬಳಿ ಬೆಳಗ್ಗೆ 10:30ರ ಸುಮಾರಿಗೆ ಚಂದಾಪುರ-ಅತ್ತಿಬೆಲೆ ಮಾರ್ಗದ ತೆರಳುವಾಗ ಚಾಲಕ ಅಜಾಗರೂಕತೆಯಿಂದ ವೇಗವಾಗಿ ಬಂದಾಗ ಬಸ್ ಮೋರಿಗೆ ಇಳಿದಿದೆ. ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ವಿಲ್ಸನ್ಗಾರ್ಡನ್ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
Next Story