ಏಶ್ಯನ್ ಗೇಮ್ಸ್ನಲ್ಲಿ ನಾಡಿಗೆ ಕೀರ್ತಿ ತಂದ ಮಹಿಳಾ ಪೊಲೀಸ್ ಪೇದೆ
ಬೆಂಗಳೂರು, ಆ.25: 18ನೆ ಏಶ್ಯನ್ ಗೇಮ್ಸ್ನ ಕಬ್ಬಡಿ ವಿಭಾಗದಲ್ಲಿ ಬೆಳ್ಳಿ ಪದಕ ಗಳಿಸುವ ಮೂಲಕ ರಾಜ್ಯ ಪೊಲೀಸ್ ಇಲಾಖೆಯ ಮಹಿಳಾ ಪೊಲೀಸ್ ಪೇದೆ ಎನ್.ಉಷಾರಾಣಿ ಕೀರ್ತಿ ಹೆಚ್ಚಿಸಿದ್ದಾರೆ.
ಶುಕ್ರವಾರ ಜಖಾರ್ತಾದಲ್ಲಿ ನಡೆದ 18ನೆ ಏಶ್ಯನ್ ಗೇಮ್ಸ್ನ ಕಬಡ್ಡಿ ವಿಭಾಗದಲ್ಲಿ 28 ವರ್ಷದ ಉಷಾರಾಣಿ ಬೆಳ್ಳಿ ಪದಕ ಗೆದ್ದಿದ್ದಾರೆ. ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಸೇರಿ ಹಿರಿಯ ಅಧಿಕಾರಿಗಳು ಪ್ರಶಂಸಿಸಿದ್ದಾರೆ.
ಈ ಹಿಂದೆಯೂ ಉಷಾರಾಣಿ, 2016ನೆ ಸಾಲಿನ ಫೆಬ್ರವರಿ ತಿಂಗಳಿನಲ್ಲಿ ಗೋಹಾತಿಯಲ್ಲಿ ನಡೆದ 12 ನೆ ದಕ್ಷಿಣ ಏಶ್ಯನ್ ಫೆಡರೇಶನ್ ಗೇಮ್ಸ್ನ ಕಬಡ್ಡಿ ವಿಭಾಗದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದರು.
ಸ್ವಾಗತ: ಆ.26 ರಂದು ಬೆಂಗಳೂರಿನ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಉಷಾರಾಣಿ ಆಗಮಿಸಲಿದ್ದು, ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಭಾಸ್ಕರ್ ರಾವ್ ಸೇರಿ ಪ್ರಮುಖರು ಸ್ವಾಗತಿಸಲಿದ್ದಾರೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
Next Story