ರಸ್ತೆ ಮಧ್ಯೆಯೇ ಅತ್ತೆ ಮೇಲೆ ಹಲ್ಲೆ: ಆರೋಪ
ಬೆಂಗಳೂರು, ಸೆ.16: ಅಳಿಯನೊಬ್ಬ ರಸ್ತೆ ಮಧ್ಯೆದಲ್ಲಿಯೇ ಅತ್ತೆಯ ಮೇಲೆ ಹಲ್ಲೆ ನಡೆಸಿರುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ನಗರದ ಬ್ಯಾಟರಾಯನಪುರದ ಮಹಿಳೆ ಲಿಂಗರತ್ನಮ್ಮ ಅವರ ಮೇಲೆ ಬಾಬು ಎಂಬಾತ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.
ಬಾಬು ವರದಕ್ಷಿಣೆಗೆ ಬೇಡಿಕೆ ಇಟ್ಟು ಪತ್ನಿ ಅನಿತಾರನ್ನು ತವರು ಮನಗೆ ಕಳುಸಿದ್ದನು. ತವರು ಮನೆ ಸೇರಿದ ಖಾಸಗಿ ಕಂಪೆನಿಯ ಉದ್ಯೋಗಿಯಾಗಿರುವ ಅನಿತಾ ಗಂಡನ ಮನೆಗೆ ಹಿಂದಿರುಗಿರಲಿಲ್ಲ. ಪತ್ನಿ ವರದಕ್ಷಿಣೆ ತೆಗೆದುಕೊಂಡು ಮನೆಗೆ ಹಿಂದಿರುಗದಕ್ಕೆ ಕೋಪಗೊಂಡ ಬಾಬು ಏಕಾಏಕಿ ಅತ್ತೆ ಮನೆಗೆ ನುಗ್ಗಿ ಹಲ್ಲೆ ನಡೆಸಿರುವುದಾಗಿ ಹೇಳಲಾಗುತ್ತಿದೆ.
ಈ ಸಂಬಂಧ ಅನಿತಾ ಕುಟುಂಬಸ್ಥರು ಬಾಬು ವಿರುದ್ಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Next Story