ಸರಕಾರಿ ಬಸ್ ದರ ಹೆಚ್ಚಳಕ್ಕೆ ಶೇ.95ರಷ್ಟು ವಿರೋಧ
ಬೆಂಗಳೂರು, ಸೆ.20: ರಾಜ್ಯ ಸರಕಾರವು ಸರಕಾರಿ ಬಸ್ಗಳ ಪ್ರಯಾಣ ದರ ಹೆಚ್ಚಳ ಸಂಬಂಧ ಬೆಂಗಳೂರುಬಸ್ ಪ್ರಯಾಣಿಕರ ವೇದಿಕೆ ಗುರುವಾರ ನಡೆಸಿದ ಮತದಾನ ಪ್ರಕ್ರಿಯೆಯಲ್ಲಿ ಶೇಕಡ 95ರಷ್ಟು ಪ್ರಯಾಣಿಕರು ದರ ಹೆಚ್ಚಳಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಕೆಂಪೇಗೌಡ ಬಸ್ ನಿಲ್ದಾಣದ ಆವರಣದಲ್ಲಿ ಪ್ರಯಾಣಿಕರ ಅಭಿಪ್ರಾಯ ಸಂಗ್ರಹಿಸಲು ಮತದಾನ ಪ್ರಕ್ರಿಯೆ ನಡೆಸಲಾಯಿತು. ಒಟ್ಟು 569 ಪ್ರಯಾಣಿಕರು ಮತ ಚಲಾವಣೆ ಮಾಡಿ, ದರ ಹೆಚ್ಚಳ ಮಾಡಿರುವುದನ್ನು ಖಂಡಿಸಿದ್ದಾರೆ. 25 ಪ್ರಯಾಣಿಕರು, ದರ ಹೆಚ್ಚಳ ಸರಿ. ಆದರೆ, ಇನ್ನಷ್ಟು ಅಭಿವೃದ್ಧಿ ಮಾಡಬೇಕು ಎಂದಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ವೇದಿಕೆ ಸಂಚಾಲಕ ವಿನಯ್, ಬಿಎಂಟಿಸಿ ಬಸ್ಗಳಲ್ಲಿ ಪ್ರತಿ ದಿನವು ಸುಮಾರು 80 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಓಡಾಡುತ್ತಾರೆ. ಕೆಲಸಕ್ಕೆ ಹೋಗುವ ಮಧ್ಯಮ ವರ್ಗದವರು ಸೇರಿದಂತೆ ಎಲ್ಲರೂ ಬಸ್ಗಳಲ್ಲಿಯೇ ಪ್ರಯಾಣ ಬೆಳೆಸುತ್ತಾರೆ.ಆದರೆ, ಸರಕಾರ ದರ ಏರಿಕೆ ಸರಿಯಲ್ಲ ಎಂದು ಹೇಳಿದರು.
Next Story