ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನ ಬಂಧನ: 2 ಕೆಜಿ ಗಾಂಜಾ ಜಪ್ತಿ
ಬೆಂಗಳೂರು, ಅ.10: ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ಯುವಕನೊಬ್ಬನನ್ನು ಬಂಧಿಸಿರುವ ಹಳಿಮಾವು ಠಾಣಾ ಪೊಲೀಸರು, 2 ಕೆಜಿ ಗಾಂಜಾ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಜೆ.ಪಿ.ನಗರದ ತಾಹೀರ್ ಅಫ್ಜಲ್ (21) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಮೂಲತಃ ಆಂಧ್ರಪ್ರದೇಶ ವಿಶಾಖಪಟ್ಟಣದ ನಿವಾಸಿ ಈತ ಅಲ್ಲಿನ ಅರಕ್ಕು, ಪಡೆರು ಹಾಗೂ ದುಮುರಿದುರ್ಗ ಗ್ರಾಮಗಳ ಜಮೀನುಗಳಲ್ಲಿ ಗಾಂಜಾ ಬೆಳೆಯುತ್ತಿದ್ದವರಿಂದ ಗಾಂಜಾ ಖರೀದಿಸಿ ರೈಲಿನ ಮೂಲಕ ಬೆಂಗಳೂರಿಗೆ ತಂದು ಖಾಕಿ ಬಣ್ಣದ ಕವರ್ಗಳಲ್ಲಿ ಸಣ್ಣ ಪ್ಯಾಕೆಟ್ಗಳನ್ನಾಗಿ ಮಾಡಿ ಮಾರಾಟ ಮಾಡುತ್ತಿದ್ದನು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಪ್ರಕರಣ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಆಗ್ನೇಯ ವಿಭಾಗದ ಹುಳಿಮಾವು ಠಾಣಾ ಪೊಲೀಸರು, ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಡಾ.ಎಂ.ಬಿ ಬೋರಲಿಂಗಯ್ಯ ತಿಳಿಸಿದ್ದಾರೆ.
Next Story