ಕೊಡಗಿನ ಸೈನಿಕ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ
ಬೆಂಗಳೂರು, ಅ.16: ಕೊಡಗಿನ ಸೈನಿಕ ಶಾಲೆಯು 6 ಹಾಗೂ 9ನೆ ತರಗತಿ ಪ್ರವೇಶ ಬಯಸುವ ಬಾಲಕರಿಂದ 2019-20ನೆ ಸಾಲಿನ ಪ್ರವೇಶಕ್ಕೆ ಪ್ರವೇಶ ಪರೀಕ್ಷೆ ನಡೆಸಲಿದೆ.
ಅಖಿಲ ಭಾರತ ಸೈನಿಕ ಶಾಲಾ ಪ್ರವೇಶ ಪರೀಕ್ಷೆಯಡಿ ಈ ಪರೀಕ್ಷೆಯನ್ನು 2019 ರ ಜ.6ರಂದು ಬೆಂಗಳೂರು, ಬಳ್ಳಾರಿ, ಶಿವಮೊಗ್ಗ ಮತ್ತು ಸೈನಿಕ ಶಾಲೆ, ಕೊಡಗಿನಲ್ಲಿ ನಡೆಸಲಾಗುತ್ತದೆ.
ಪ್ರವೇಶ ಅರ್ಜಿ ನಮೂನೆಯನ್ನು ನ.28ರವರೆಗೆ ಶಾಲೆಯ ವೆಬ್ಸೈಟ್ www.sainikschoolkodagu.edu.in ನಲ್ಲಿ ಪಡೆದು ಸಲ್ಲಿಸಬಹುದು. ಸ್ಪರ್ಧಾತ್ಮಕ ಪರೀಕ್ಷೆ ಮಾದರಿಯಲ್ಲಿ ಈ ಪ್ರವೇಶ ಪರೀಕ್ಷೆ ನಡೆಸಲಾಗುವುದು. ಆಸಕ್ತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದೆಂದು ಸೈನಿಕ ಶಾಲೆ, ಕೊಡಗು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
Next Story