ಕೊಕೇನ್ ಮಾರಾಟ: ವಿದೇಶಿ ಪ್ರಜೆ ಸೆರೆ
ಬೆಂಗಳೂರು, ಫೆ.3: ಮಾದಕ ವಸ್ತು ಕೊಕೇನ್ ಮಾರಾಟ ಆರೋಪದಡಿ ವಿದೇಶಿ ಪ್ರಜೆಯೊರ್ವನನ್ನು ಬಂಧಿಸಿರುವ ಸಿಸಿಬಿ ಪೊಲೀಸರು, 8 ಗ್ರಾಂ ತೂಕದ ಕೊಕೇನ್ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಂಗೋ ದೇಶದ ಬೂಸಾ ಡಾವೇ(28) ಬಂಧಿತ ವಿದೇಶಿ ಪ್ರಜೆ ಎಂದು ಸಿಸಿಬಿ ತಿಳಿಸಿದೆ.
ನಗರದ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೈರತಿ ಕ್ರಾಸ್ ಬಸ್ ನಿಲ್ದಾಣದ ಬಳಿ ಕಾಂಗೋ ದೇಶದ ವ್ಯಕ್ತಿಯೊರ್ವ ಕೊಕೇನ್ ಎಂಬ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಎನ್ನುವುದರ ಬಗ್ಗೆ ಮಾಹಿತಿ ಸಂಗ್ರಹಿಸಿ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಬಂಧಿತ ಆರೋಪಿಯಿಂದ 8 ಗ್ರಾಂ ಕೊಕೇನ್, ಬೈಕ್ ,ಮೊಬೈಲ್ ಜಪ್ತಿ ಮಾಡಿ, ಇಲ್ಲಿನ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ.
Next Story