ಬಾಲಕನ ಬ್ಲಾಕ್ ಮೇಲ್: ಯುವಕನ ಬಂಧನ
ಬೆಂಗಳೂರು, ಎ.20: ಬಾಲಕನೊಬ್ಬನ ಬೆತ್ತಲೆ ಫೋಟೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ ಯುವಕನೋರ್ವನನ್ನು ಇಲ್ಲಿನ ರಾಜಾಜಿನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ನಗರದ ನಿವಾಸಿ ವಿಶ್ವಾನಾಥ್ ಎಂಬಾತ ಬಂಧಿತ ಆರೋಪಿಯಾಗಿದ್ದು, ಅಪ್ರಾಪ್ತ ಬಾಲಕಿ ಮತ್ತು ಬಾಲಕನೊಬ್ಬನಿಗೆ ಇನ್ಸ್ಟಾಗ್ರಾಂ ಮೂಲಕ ಆರೋಪಿ ಪರಿಚಯ ಮಾಡಿಕೊಂಡಿದ್ದು, ಬಳಿಕ ಆತನ ಇನ್ಸ್ಟಾಗ್ರಾಂ ಹ್ಯಾಕ್ ಮಾಡಿ, ಬಾಲಕನ ಬೆತ್ತಲೆ ಫೋಟೋಗಳನ್ನು ಕಳವು ಮಾಡಿದ್ದಾನೆ.
ಕೆಲ ದಿನಗಳ ಬಳಿಕ, ಬೆತ್ತಲೆ ಫೋಟೋಗಳಿವೆ ಎಂದು ಬೆದರಿಸಿ ಹಂತ ಹಂತವಾಗಿ 7 ಲಕ್ಷ ರೂ. ನಗದು, ಚಿನ್ನಾಭರಣವನ್ನು ವಿಶ್ವನಾಥ್ ಪಡೆದುಕೊಂಡಿದ್ದಾನೆ. ಆದರೂ, ಮತ್ತೆ ಹಣ ನೀಡುವಂತೆ ಒತ್ತಡ ಹಾಕಿದ ಹಿನ್ನೆಲೆಯಲ್ಲಿ ಬಾಲಕ ಪೊಲೀಸರಿಗೆ ದೂರು ನೀಡಿದ್ದು, ಈ ಸಂಬಂಧ ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
Next Story