46 ಮಂದಿ ಎಚ್ಸಿ ಹುದ್ದೆಯಿಂದ ಎಎಸ್ಐ ಹುದ್ದೆಗೆ ಮುಂಭಡ್ತಿ
ಬೆಂಗಳೂರು, ಮೇ 19: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಭಡ್ತಿ ಮೀಸಲಾತಿ ಸಂಬಂಧ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಲ್ಲಿ ಎಚ್ಸಿ ಹುದ್ದೆಗೆ ಹಿಂಭಡ್ತಿಗೆ ಒಳಗಾಗಿದ್ದ 46 ಮಂದಿಗೆ ಎಎಸ್ಐ ಹುದ್ದೆಗೆ ಮುಂಭಡ್ತಿ ನೀಡಿ ಆದೇಶ ಹೊರಡಿಸಲಾಗಿದೆ.
ಎಎಸ್ಐ ಹುದ್ದೆಗೆ ಮುಂಭಡ್ತಿ ಪಡೆದಿರುವ ಮೇಲ್ಕಂಡ 46 ಮಂದಿ ಲೋಕಸಭೆ ಚುನಾವಣೆ ಮಾದರಿ ನೀತಿ ಸಂಹಿತಿ ಅವಧಿ ಪೂರ್ಣಗೊಂಡ ಬಳಿಕ ಅವರಿಗೆ ನಿಯುಕ್ತಿಗೊಳಿಸಲಾದ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳತಕ್ಕದ್ದು ಎಂದು ಡಿಸಿಪಿ ಎಂ.ಎನ್.ಅನುಚೇತ್ ಆದೇಶದಲ್ಲಿ ಸೂಚಿಸಿದ್ದಾರೆ.
Next Story