ಎಸಿಬಿ ಎಸ್ಪಿಯಾಗಿ ಐಪಿಎಸ್ ಅಧಿಕಾರಿ ಅಬ್ದುಲ್ ಅಹದ್ ವರ್ಗಾವಣೆ
ಬೆಂಗಳೂರು, ಜೂ. 28: ಬೆಂಗಳೂರಿನ ವೈಟ್ ಫೀಲ್ಡ್ ಡಿಸಿಪಿ ಆಗಿರುವ ಐಪಿಎಸ್ ಅಧಿಕಾರಿ ಅಬ್ದುಲ್ ಅಹದ್ ಅವರನ್ನು ಭ್ರಷ್ಟಾಚಾರ ನಿಗ್ರಹ ದಳದ ಬೆಂಗಳೂರು ನಗರ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ.
ದ.ಕ ಜಿಲ್ಲೆಯ ಮೂಡುಬಿದಿರೆಯ ಅಬ್ದುಲ್ ಅಹದ್ ಅವರು ಈ ಹಿಂದೆ ಲೋಕಾಯುಕ್ತ ಎಸ್ಪಿ, ಸಿಐಡಿ ಆರ್ಥಿಕ ಅಪರಾಧ ದಳದ ಎಸ್ಪಿ, ಬೆಂಗಳೂರು ಗ್ರಾಮಾಂತರ ಹೆಚ್ಚುವರಿ ಎಸ್ಪಿಯಾಗಿ ಸೇವೆ ಸಲ್ಲಿಸಿದ್ದಾರೆ.
Next Story