ಶಟರ್ ಮುರಿದು 10 ಅಂಗಡಿಗಳಲ್ಲಿ ಕಳವು
ಬೆಂಗಳೂರು, ಜು.1: ರಾಜಧಾನಿ ಬೆಂಗಳೂರಿನಲ್ಲಿ ಬರೋಬ್ಬರಿ 10 ಅಂಗಡಿಗಳಲ್ಲಿ ಕಳ್ಳತನ ಆಗಿರುವ ಪ್ರಕರಣ ಇಲ್ಲಿನ ಬಸವನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಎನ್.ಆರ್ ಕಾಲನಿ, ಡಿವಿಜಿ ರಸ್ತೆಯಲ್ಲಿರುವ ಮೆಡಿಕಲ್ ಶಾಪ್, ಹೊಟೇಲ್, ಬೀಡಾ ಅಂಗಡಿ, ಪುಸ್ತಕ ಮಳಿಗೆ, ಗುಜರಿ ಅಂಗಡಿ ಸೇರಿದಂತೆ 10ಕ್ಕೂ ಹೆಚ್ಚು ಅಂಗಡಿಗಳ ಶೆಟರ್ ಮುರಿದು ಕಳ್ಳತನ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಸೋಮವಾರ ಬೆಳಗ್ಗೆ ಬಂದು ಬಾಗಿಲು ತೆರೆದ ವೇಳೆ ಕಳ್ಳತನವಾಗಿರುವುದನ್ನು ನೋಡಿ ಅಂಗಡಿ ಮಾಲಕರು ಆತಂಕಗೊಂಡಿದ್ದಾರೆ. ಕಳ್ಳತನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇಬ್ಬರು ಯುವಕರು ಕೃತ್ಯವೆಸಗಿರುವುದು ಬೆಳಕಿಗೆ ಬಂದಿದೆ.
ಈ ಸಂಬಂಧ ಬಸವನಗುಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ತನಿಖೆ ಕೈಗೊಂಡಿದ್ದಾರೆ.
Next Story