ಕೆಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ಆರೋಪ: ಬುಕ್ಕಿ ಬಂಧನ
ಬೆಂಗಳೂರು, ಅ.2: ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಪಂದ್ಯಾವಳಿ ವೇಳೆ ನಡೆದಿದೆ ಎನ್ನಲಾದ ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಸಂಬಂಧ ಬುಕ್ಕಿಯೋರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಭಾವೇಶ್ ಬಾಫ್ನಾ ಎಂಬಾತ ಆರೋಪಿಯಾಗಿದ್ದು, ಇದೇ ಪ್ರಕರಣದಲ್ಲಿ ಆರೋಪಿಯಾಗಿರುವ ಸನ್ಯಾಮ್ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಸಿಸಿಬಿ ತಿಳಿಸಿದೆ.
ಬಳ್ಳಾರಿ ಟಸ್ಕರ್ ತಂಡದ ಬೌಲರ್ಗಳನ್ನು ಸಂಪರ್ಕಿಸಿದ್ದ ಈ ಇಬ್ಬರು ಆರೋಪಿಗಳು, ಪ್ರತಿ ಓವರ್ಗೆ ಹೆಚ್ಚು ಹಣ ನೀಡುವ ಆಮಿಷ ಒಡ್ಡಿದ್ದರು. ಆದರೆ, ಬೌಲರ್ಗಳು ಈ ಆಮಿಷವನ್ನು ನಿರಾಕರಿಸಿದ್ದರು ಎಂದು ಅವರು ಹೇಳಿದ್ದಾರೆ. ಬಂಧಿತ ಬುಕ್ಕಿ ಭಾವೇಶ್ ಬಾಫ್ನಾನನ್ನು ತೀವ್ರ ವಿಚಾರಣೆಗೊಳಪಡಿಸಿ, ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Next Story