ಅಕ್ರಮ ವಾಸ: ಐವರು ವಿದೇಶಿ ಪ್ರಜೆಗಳ ಬಂಧನ
ಬೆಂಗಳೂರು, ಅ.20: ನಗರ ವಿವಿಧ ಕಡೆ ನೆಲೆಸಿರುವ ವಿದೇಶಿ ಪ್ರಜೆಗಳ ಮನೆ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು, ನಿಯಮ ಬಾಹಿರ ನೆಲೆಸಿರುವ ಐವರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಅವಧಿ ಪೂರ್ಣಗೊಂಡಿದ್ದರೂ ಅಕ್ರಮವಾಗಿ ವಾಸಿಸುತ್ತಿರುವುದು ದಾಳಿಯಲ್ಲಿ ಪತ್ತೆಯಾಗಿದೆ. ಆರೋಪಿಗಳ ವಿರುದ್ಧ ರಾಮಮೂರ್ತಿ ನಗರ ಹಾಗೂ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.
ಆರೋಪಿಗಳು ಶಿಕ್ಷಣ ಹಾಗೂ ವ್ಯಾಪಾರಿ ವೀಸಾದಡಿ ನಗರಕ್ಕೆ ಆಗಮಿಸಿ ನೆಲೆಸಿದ್ದು, ಪಾಸ್ಪೋರ್ಟ್ ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ನೆಲೆಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
Next Story