ಆನ್ಲೈನ್ ಮೂಲಕ ನೀರಿನ ಬಿಲ್ ಪಾವತಿಸಲು ಸೂಚನೆ
ಬೆಂಗಳೂರು, ಎ. 9: ರಾಜ್ಯದಲ್ಲಿ ಕೊರೋನ ವೈರಸ್ ಸೋಂಕಿನಿಂದ ಆಗಿರುವ ಲಾಕ್ಡೌನ್ ಹಿನ್ನೆಲೆಯಲ್ಲಿ ಬೆಂಗಳೂರು ನೀರುಸರಬರಾಜು ಮತ್ತು ಒಳಚರಂಡಿ ಮಂಡಳಿ ನೀರಿನ ಮಾಪನ ಓದುಗರು ಮನೆ-ಮನೆಗೆ ತೆರಳಿ ನೀರಿನ ಬಿಲ್ ವಿತರಿಸಲು ಸಾಧ್ಯವಾಗದಿರುವುದರಿಂದ ನೀರಿನ ಬಿಲ್ ಅನ್ನು ಮಂಡಳಿಯಲ್ಲಿ ಲಭ್ಯವಿರುವ ಗ್ರಾಹಕರ ಮೊಬೈಲ್ ನಂಬರ್ ಗಳಿಗೆ ಕಳುಹಿಸಲಾಗುತ್ತಿದೆ.
ದಿನವಹಿ ವಾಚನ ಎಸ್ಎಂಎಸ್ ಮುಖಾಂತರ ಬಿಲ್ ಕಳುಹಿಸಲಾಗುತ್ತಿದೆ. ಗ್ರಾಹಕರು ತಮ್ಮ ಎಸ್ಎಂಎಸ್ ನಲ್ಲಿರುವ ಲಿಂಕ್ ಮುಖಾಂತರ ನೀರಿನ ಬಿಲ್ ಅನ್ನು ಪಾವತಿಸಬಹುದಾಗಿರುತ್ತದೆ. ಅಲ್ಲದೆ ಮಂಡಳಿಯ ಅಧಿಕೃತ ವೆಬ್ಸೈಟ್ ಮೂಲಕವೂ ಬಿಲ್ ಪಾವತಿಸಬಹುದು. ಪೇಟಿಎಂ, ಫೋನ್ ಪೇ, ಗೂಗಲ್ ಪೇ ಮೂಲಕವೂ ಗ್ರಾಹಕರು ನೀರಿನ ಬಿಲ್ ಪಾವತಿ ಮಾಡಬಹುದು ಎಂದು ಮಂಡಳಿ ತಿಳಿಸಿದೆ.
Next Story