ಬೆಂಗಳೂರು: ಪೊಲೀಸ್ ಸಿಬ್ಬಂದಿಯೊಬ್ಬರಿಗೆ ಕೊರೋನ ಸೋಂಕು ದೃಡ
ಬೆಂಗಳೂರು, ಜೂ.1: ಇಲ್ಲಿನ ಜೆಜೆಆರ್ ನಗರ ಪೊಲೀಸ್ ಠಾಣೆಯ 43 ವರ್ಷದ ಪೊಲೀಸ್ ಸಿಬ್ಬಂದಿಯೊಬ್ಬರಿಗೆ ಕೊರೋನ ಸೋಂಕು ದೃಢಪಟ್ಟಿದೆ ಎಂದು ವರದಿಯಾಗಿದೆ.
ಪಾದರಾಯನಪುರ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾರ್ಯನಿರ್ವಹಿಸಿದ ಹಿನ್ನೆಲೆ ಠಾಣೆಯ ಎಲ್ಲ ಸಿಬ್ಬಂದಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಓರ್ವ ಸಿಬ್ಬಂದಿಗೆ ಪಾಸಿಟಿವ್ ಬಂದಿರುವುದಾಗಿ ತಿಳಿದುಬಂದಿದೆ.
43 ವರ್ಷದ ಪೊಲೀಸ್ ಸಿಬ್ಬಂದಿ, ಪಾದರಾಯನಪುರದ 11ನೇ ಕ್ರಾಸ್ನಲ್ಲಿ ಈ ಹಿಂದೆ ಬೀಟ್ ಮಾದರಿ ಕಾರ್ಯ ನಿರ್ವಹಿಸುತ್ತಿದ್ದರು. ಕುಟುಂಬಸ್ಥರೊಂದಿಗೆ ಇಲ್ಲಿನ ನಾಯಂಡಹಳ್ಳಿ ವಾರ್ಡ್ನಲ್ಲಿ ವಾಸವಾಗಿದ್ದು, ಸದ್ಯ ಅವರ ಸಂಪರ್ಕದಲ್ಲಿದ್ದ ಹಲವರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
Next Story