ಎಸೆಸೆಲ್ಸಿ ಫಲಿತಾಂಶ ಪ್ರಕಟ
ಬೆಂಗಳೂರು : ಜೂನ್-ಜುಲೈನಲ್ಲಿ ನಡೆದ ಎಸೆಸೆಲ್ಸಿ ಫಲಿತಾಂಶವು ಸೋಮವಾರ ಮಧ್ಯಾಹ್ನ 3 ಗಂಟೆಯ ಬಳಿಕ ಪ್ರಕಟಗೊಂಡಿದೆ.
ಎಸೆಸೆಲ್ಸಿ ಪರೀಕ್ಷೆ ಬರೆದ 8,11,050 ವಿದ್ಯಾರ್ಥಿಗಳ ಪೈಕಿ, 5,82,316 ಪಾಸಾಗಿದ್ದಾರೆ. ಈ ಬಾರಿ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದು, 6 ಮಂದಿ ವಿದ್ಯಾರ್ಥಿಗಳು 625ರಲ್ಲಿ 625 ಅಂಕ ಪಡೆದಿದ್ದಾರೆ. 220 ಮೌಲ್ಯಮಾಪನ ಕೇಂದ್ರಗಳಲ್ಲಿ ಮೌಲ್ಯಮಾಪನ ಪ್ರಕ್ರಿಯೆ ನಡೆದಿತ್ತು.
ಕೊರೋನ ಹಿನ್ನೆಲೆ ಫಲಿತಾಂಶವನ್ನು ವಿದ್ಯಾರ್ಥಿಗಳ ಅಥವಾ ಪೋಷಕರ ಮೊಬೈಲ್ಗೆ ಕಳಿಸಿಕೊಡಲಾಗುತ್ತದೆ. ಅಲ್ಲದೆ, ಎಸೆಸೆಲ್ಸಿ ಬೋರ್ಡ್ ಅಧಿಕೃತ ವೆಬ್ಸೈಟ್ www.sslc.kar.nic.in ಹಾಗೂ karresults.nic.in ನಲ್ಲಿ ಕೂಡ ಫಲಿತಾಂಶ ಪಡೆಯಬಹುದಾಗಿದೆ.
Next Story