ಬೆಂಗಳೂರು ಹಿಂಸಾಚಾರ: ಆರೋಪಿಗಳನ್ನು ಕೋರ್ಟ್ ಮುಂದೆ ಹಾಜರುಪಡಿಸಿದ ಪೊಲೀಸರು
ಫೈಲ್ ಚಿತ್ರ
ಬೆಂಗಳೂರು, ಆ.13: ನಗರದ ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ 151 ಮಂದಿ ಆರೋಪಿಗಳನ್ನು ಮೇಯೋ ಹಾಲ್ ಕೋರ್ಟ್ ನ್ಯಾಯಾಧೀಶರ ಮುಂದೆ ವಿಚಾರಣೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಿದ್ದಾರೆ.
ಈ ಕುರಿತು ವಿಚಾರಣೆ ನಡೆಸಿದ ನ್ಯಾಯಪೀಠ, ಸಿಸಿಬಿ ಪೊಲೀಸರು ಬಂಧಿಸಿರುವ 151 ಮಂದಿ ಆರೋಪಿಗಳನ್ನು ಇವರ ಕೊರೋನ ಪರೀಕ್ಷಾ ವರದಿ ಬರುವವರೆಗೂ ಪೊಲೀಸ್ ವಶಕ್ಕೆ ಒಪ್ಪಿಸಿದ್ದಾರೆ.
ಈ ಎಲ್ಲ ಆರೋಪಿಗಳ ಪರೀಕ್ಷಾ ವರದಿ ಬಂದ ಬಳಿಕ ಮತ್ತೇ ಇವರನ್ನು ಕೋರ್ಟ್ ಮುಂದೆ ಹಾಜರುಪಡಿಸಲಾಗುವುದು. ಒಂದು ವೇಳೆ ಆರೋಪಿಗಳನ್ನು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರೆ ಅವರನ್ನು ಕಾರಾಗೃಹಕ್ಕೆ ಸ್ಥಳಾಂತರಿಸಲಾಗುತ್ತದೆ.
Next Story