ಕೊರೋನ ಸೋಂಕಿನಿಂದ ಇನ್ಸ್ಪೆಕ್ಟರ್ ಮೃತ್ಯು
ಬೆಂಗಳೂರು, ಸೆ.15: ಅನಾರೋಗ್ಯದಿಂದ ಬಳಲುತ್ತಿದ್ದ ಇನ್ಸ್ಪೆಕ್ಟರ್ ಮೀರ್ ಗೌಸ್(55) ಅವರಿಗೆ ಕೊರೋನ ಸೋಂಕು ತಗುಲಿದ ಪರಿಣಾಮ ಮಂಗಳವಾರ ಮೃತರಾಗಿದ್ದಾರೆ.
ನಗರದ ವಿಲ್ಸನ್ಗಾರ್ಡನ್ನ ಮೀರ್ ಗೌಸ್ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಕೆಲ ದಿನಗಳ ಹಿಂದೆ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ವಾರ ಕೊರೋನ ಪರೀಕ್ಷೆಗೆ ಮಾಡಿದಾಗ, ಸೋಂಕು ತಗಲಿರುವುದು ದೃಢಪಟ್ಟಿತ್ತು.
ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮೀರ್ ಗೌಸ್ ಅವರು ಆಪ್ತರು, ಅಪಾರ ಬಂಧುಗಳನ್ನು ಅಗಲಿದ್ದಾರೆ.
Next Story