ಚೆನ್ನೈ ಕೈಗಾರಿಕೋದ್ಯಮಿಯ ವಿರುದ್ಧ ಪ್ರಕರಣ ದಾಖಲು: ಸ್ಟೀಲ್ ಕಾಸ್ಟಿಂಗ್ ಪಡೆದು ಲಕ್ಷಾಂತರ ರೂ. ವಂಚನೆ
ಶಿವಮೊಗ್ಗ, ಫೆ. 12: ಶಿವಮೊಗ್ಗದ ಕ್ಯಾಸ್ಟ್ ಪ್ರೈವೆಟ್ ಲಿಮಿಟಿಡ್ ಕಂಪೆನಿ ಸರಬರಾಜು ಮಾಡಿದ ಸ್ಟೀಲ್ ಕಾಸ್ಟಿಂಗ್ ಉಪಕರಣಗಳನ್ನು ಪಡೆದು ಹಣ ನೀಡದೆ ವಂಚಿಸಿ, ಕೊಲೆ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ತಮಿಳುನಾಡು ರಾಜ್ಯದ ಕೈಗಾರಿಕೋದ್ಯಮಿಯ ವಿರುದ್ಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವಮೊಗ್ಗದ ಗೆಜ್ಜೇನಹಳ್ಳಿಯಲ್ಲಿರುವ ಶಿವಸಾಯಿ ಕ್ಯಾಸ್ಟ್ ಪ್ರೈವೆಟ್ ಲಿಮಿಟೆಡ್ನ ಸುಮಂತ್ ಎಂಬವರು ಈ ಬಗ್ಗೆ ದೂರು ನೀಡಿದ್ದಾರೆ. ತಮಿಳುನಾಡು ರಾಜ್ಯದ ಚೆನ್ನೈನ ಕುಪ್ಪಂಪೂರ್ಣ ಮಲಿಯಲ್ಲಿರುವ ಕೈಗಾರಿಕೋದ್ಯಮಿಯೋರ್ವರ ವಿರುದ್ಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ.
ಆರೋಪವೇನು?: ಸುಮಂತ್ ಎಂಬವರು ತಮ್ಮ ಇಂಡಸ್ಟ್ರಿಯಲ್ಲಿ ಸಿದ್ಧಪಡಿಸಿದ್ದ ಸ್ಟೀಲ್ ಕಾಸ್ಟಿಂಗ್ಗಳನ್ನು ಆರೋಪಿತರಿಗೆ ಕಳುಹಿಸಿಕೊಟ್ಟಿದ್ದರು. ಆದರೆ, ಆರೋಪಿ ವ್ಯಕ್ತಿಯು ಸ್ಟೀಲ್ ಕಾಸ್ಟಿಂಗ್ ಪಡೆದಿದ್ದಕ್ಕೆ ನೀಡಬೇಕಾಗಿದ್ದ 19.53 ಲಕ್ಷ ರೂ. ಕೊಡದೆ ವಂಚಿಸಿದ್ದಾರೆ.
Next Story