ಪಿಯುಸಿ ಪೂರಕ ಪರೀಕ್ಷೆ ಶುಲ್ಕ ಪಾವತಿಸಲು ಅವಧಿ ವಿಸ್ತರಣೆ
ಬೆಂಗಳೂರು, ಜೂ. 1: 2017ರ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗೆ ಪುನರಾವರ್ತಿತ ಅಭ್ಯರ್ಥಿಗಳು ಪರೀಕ್ಷಾ ಶುಲ್ಕ ಪಾವತಿಸಲು ಜೂ.3ರ ಸಂಜೆಯ ವರೆಗೆ ಅವಧಿ ವಿಸ್ತರಿಸಲಾಗಿದೆ.
ಕಾಲೇಜಿನವರು ವಿಸ್ತರಿಸಲಾದ ದಿನಾಂಕಗಳಲ್ಲಿ ಸ್ವೀಕರಿಸಿದ ಪರೀಕ್ಷಾ ಶುಲ್ಕವನ್ನು ಖಜಾನೆಗೆ ಜಮೆ ಮಾಡಲು ಜೂ.5 ಕೊನೆಯ ದಿನ. ಕಾಲೇಜಿನವರು ಪರೀಕ್ಷಾ ಶುಲ್ಕ ಅರ್ಜಿಗಳನ್ನು ನೇರವಾಗಿ ಕೇಂದ್ರ ಕಚೇರಿಗೆ ತಪಿಸಲು ಜೂ.6 ಕೊನೆಯ ದಿನವಾಗಿದೆ.
ಈ ಹಿಂದೆ ಮೇ 23ರಂದು ಪರೀಕ್ಷಾ ಶುಲ್ಕ ಪಾವತಿಸಲು ಕೊನೆಯ ದಿನವಾಗಿತ್ತು. ಸಾಕಷ್ಟು ವಿದ್ಯಾರ್ಥಿಗಳು ಶುಲ್ಕ ಪಾವತಿಸಲು ಸಾಧ್ಯವಾಗದ ಕಾರಣ ವಿದ್ಯಾರ್ಥಿ ಮತ್ತು ಪೋಷಕರ ಒತ್ತಾಯದ ಹಿನ್ನೆಲೆಯಲ್ಲಿ ಶುಲ್ಕ ಪಾವತಿಸಲು ಅವಧಿ ವಿಸ್ತರಿಸಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.
Next Story