ಜೂಜಾಟ: ನಾಲ್ವರ ಬಂಧನ
ಬೆಂಗಳೂರು, ಜು.23: ಜೂಜಾಟ ಆಡುತ್ತಿದ್ದ ಆರೋಪದ ಮೇಲೆ ನಾಲ್ವರನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ನಿವಾಸಿಗಳಾದ ರಜನಿ(40), ಇರ್ಫಾನ್(26), ರಘು(23) ಹಾಗೂ ಸದ್ದಾಂ(24) ಬಂಧಿತ ಆರೋಪಿಗಳೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಗರದ ಬ್ರಿಗೇಡ್ ರೋಡ್ನಲ್ಲಿ ಬಾಂಬಿನೋ ಅಸೋಸಿಯೇಷನ್ ಹೆಸರಿನ ವಿಡಿಯೋ ಗೇಮ್ಸ್ ಅಂಗಡಿಯಲ್ಲಿ ಹಣವನ್ನು ಪಣವಾಗಿ ಕಟ್ಟಿಕೊಂಡು, ವಿಡಿಯೋಗೇಮ್ ಜೂಜಾಟ ಆಡುತ್ತಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಗಳಿಂದ 7 ಸಾವಿರ ರೂ.ನಗದು ಐದು ವಿಡಿಯೋ ಗೇಮ್ ಮದರ್ ಬೋರ್ಡ್, ಹತ್ತು ಬೀಗದ ಕೀಗಳನ್ನು ವಶಕ್ಕೆ ಪಡೆದು, ಇಲ್ಲಿನ ಕಬ್ಬನ್ಪಾರ್ಕ್ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.
Next Story