ದ್ವಿತೀಯ ಪಿಯುಸಿ ದಾಖಲಾತಿ ಅವಧಿ ಜು.28ರ ವರೆಗೆ ವಿಸ್ತರಣೆ
ಬೆಂಗಳೂರು, ಜು. 26: 2017-18ನೆ ಸಾಲಿನ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ದಾಖಲಾತಿಗೆ ಜು.28ರ ವರೆಗೆ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಜು.21ರ ವರೆಗೆ ದಂಡ ಶುಲ್ಕ ವಿಲ್ಲದೆ ದಾಖಲಾತಿಗೆ ಕೊನೆ ದಿನಾಂಕವಾಗಿತ್ತು. ಇದೀಗ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಿಶೇಷ ದಂಡ-2184 ರೂ.(ಆ ಪೈಕಿ 1,680 ರೂ.ಮತ್ತು 504 ರೂ.)ಗಳೊಂದಿಗೆ ದಿನಾಂಕ ವಿಸ್ತರಿಸಿ ಆದೇಶಿಸಲಾಗಿದೆ.
ಸೂಚಿತ ದಿನಾಂಕಗಳಲ್ಲಿ ದಾಖಲಾಗುವ ಪಿಯು ವಿದ್ಯಾರ್ಥಿಗಳು ಈ ಶೈಕ್ಷಣಿಕ ವರ್ಷದಲ್ಲಿ ವಾರ್ಷಿಕ ಶೇ.75ರಷ್ಟು ಹಾಜರಾತಿ ಪಡೆಯುವ ಬಗ್ಗೆ ವಿದ್ಯಾರ್ಥಿಗಳಿಂದ ಮುಚ್ಚಳಿಕೆಯನ್ನು ಕಡ್ಡಾಯಾವಾಗಿ ಪಡೆದು ದಾಖಲಾತಿಯನ್ನು ನೀಡುವುದು ಎಂದು ಆದೇಶದಲ್ಲಿ ಸೂಚಿಸಲಾಗಿದೆ.
Next Story