ಬಿಬಿಎಂಪಿ ಮೇಯರ್ ಚುನಾವಣೆಗೆ ದಿನ ನಿಗದಿ
ಬೆಂಗಳೂರು, ಸೆ.9: ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಮೇಯರ್ ಹಾಗೂ ಉಪ ಮೇಯರ್ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ.
51ನೆ ಮೇಯರ್ ಹಾಗೂ 50ನೆ ಉಪ ಮೇಯರ್ ಚುನಾವಣೆಯು ಸೆ.28 ರಂದು ಬೆಳಗ್ಗೆ 11:30ಕ್ಕೆ ನಡೆಯಲಿದೆ.
ಸ್ಥಾಯಿ ಸಮಿತಿಯ ಅವಧಿ ಅಕ್ಟೋಬರ್ಗೆ ಕೊನೆಗೊಳ್ಳಲಿದೆ. ಹೀಗಾಗಿ 12 ಸ್ಥಾಯಿ ಸಮಿತಿಯ ಅಧ್ಯಕ್ಷರು, ಸದಸ್ಯರ ಆಯ್ಕೆಗೆ ಪ್ರತ್ಯೇಕ ಚುನಾವಣೆ ನಡೆಯಲಿದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
Next Story