‘ಜಾಂವಯ್’ ಕೊಂಕಣಿ ಚಿತ್ರ ಬಿಡುಗಡೆ
ಮಂಗಳೂರು, ಎ.13: ಸಂಗಾತಿ ಕ್ರಿಯೇಶನ್ಸ್ ನಿರ್ಮಾಣದ ‘ಜಾಂವಯ್’ ಕೊಂಕಣಿ ಚಿತ್ರವನ್ನು ಇಂದು ನಗರದ ಭಾರತ್ಮಾಲ್ನ ಭಾರತ್ ಸಿನೆಮಾಸ್ನಲ್ಲಿ ಬಿಷಪ್ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಬಿಡುಗಡೆಗೊಳಿಸಿದರು.
ಕರಾವಳಿ ಸೇರಿದಂತೆ 11 ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಕಾಣಲಿದೆ. ಚಿತ್ರವನ್ನು ಹ್ಯಾರಿ ಫೆರ್ನಾಂಡಿಸ್ ನಿರ್ದೇಶನ ಮಾಡಿದ್ದಾರೆ. ಬಾಲಿವುಡ್ ನಟಿ ವರ್ಷಾ ಉಸ್ಗಾಂವ್ಕರ್ ಹಾಗೂ ಗೋವಾದ ಕಲಾವಿದ ಪ್ರಿನ್ಸ್ ಜೇಕಬ್ ನಟಿಸಿದ್ದಾರೆ. ಇದರ ಜತೆಯಲ್ಲಿ ಕರಾವಳಿಯ ಕಲಾವಿದರು ಬಣ್ಣ ಹಚ್ಚಿದ್ದಾರೆ.
ಚಿತ್ರ ಬಿಡುಗಡೆಯ ಸಮಾರಂಭದಲ್ಲಿ ನಿರ್ಮಾಪಕರಾದ ವಾಲ್ಟರ್ ಡಿಸೋಜ, ಸಿರಿಲ್ ಕ್ಯಾಸ್ಟಲಿನೋ, ನಿರ್ದೇಶಕ ಹೆರಿ ಫೆರ್ನಾಂಡಿಸ್, ಕಲಾವಿದ ರೋನ್ಸ್ ಲಂಡನ್, ನಟ ಸ್ವಾನಿ ಅಲ್ವಾರೀಸ್ ಹಾಗೂ ಇತರರು ಉಪಸ್ಥಿತರಿದ್ದರು.
Next Story