ಲೈಂಗಿಕ ಕಿರುಕುಳದಿಂದ ಬೇಸತ್ತು ಸಿನೆಮಾರಂಗ ತೊರೆದಿದ್ದೇನೆ ಎಂದ ನಟಿ
ಸ್ಯಾಂಡಲ್ ವುಡ್ ನಲ್ಲೂ ಪ್ರತಿಧ್ವನಿಸಿದ ‘ಮೀಟೂ’
ಬೆಂಗಳೂರು, ಅ.14: ಬಾಲಿವುಡ್, ಪತ್ರಿಕಾರಂಗದಲ್ಲಿ ತಲ್ಲಣ ಮೂಡಿಸಿರುವ ಲೈಂಗಿಕ ಕಿರುಕುಳ ಆರೋಪ ಇದೀಗ ಸ್ಯಾಂಡಲ್ ವುಡ್ ನಲ್ಲೂ ಕೇಳಿಬಂದಿದೆ. ಸ್ಯಾಂಡಲ್ ವುಡ್ ನ ಲೈಂಗಿಕ ಕಿರುಕುಳಗಳಿಂದ ಬೇಸತ್ತು ತಾನು ಸಿನೆಮಾರಂಗವನ್ನು ತೊರೆಯುತ್ತಿದ್ದೇನೆ ಎಂದು ‘ಎರಡನೇ ಸಲ’ ಚಿತ್ರದ ನಟಿ ಸಂಗೀತಾ ಭಟ್ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
“ನಾನು ಯಾವುದೇ ಕರುಣೆ, ಮಾಧ್ಯಮದ ಗಮನ ಸೆಳೆಯಲು ಅಥವಾ ನನಗೆ ನೋವು ಕೊಟ್ಟವರ ಮೇಲೆ ಆರೋಪಗಳನ್ನು ಹೊರಿಸಲು ಇದನ್ನು ಹೇಳುತ್ತಿಲ್ಲ. ನಾನು ಈಗಾಗಲೇ ಚಿತ್ರರಂಗವನ್ನು ತೊರೆದಿದ್ದೇನೆ. ನಾನೇಕೆ ಸಿನೆಮಾರಂಗವನ್ನು ತೊರೆದಿದ್ದೇನೆ ಎಂದು ಹೇಳುವುದಕ್ಕಾಗಿ ಮಾತ್ರ ನಾನು ಇವುಗಳನ್ನು ಹೇಳುತ್ತಿದ್ದೇನೆ” ಎಂದವರು ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಸಿನಿಮಾರಂಗಕ್ಕೆ ಪ್ರವೇಶಿಸಿದ ನಂತರ ನಿರ್ದೇಶಕರು, ನಟರಿಂದ ತಾನು ಲೈಂಗಿಕ ಕಿರುಕುಳ ಅನುಭವಿಸಿದ್ದೇನೆ ಎಂದವರು ಆರೋಪಿಸಿದ್ದಾರೆ.
Next Story