ಚ್ಯಾಲೆಂಜಿಂಗ್ ಪಾತ್ರದಲ್ಲಿ ಯಾಮಿ ಗೌತಮ್
ಬಹುಭಾಷಾ ನಟಿ ಯಾಮಿ ಗೌತಮ್, ತನ್ನ ಮುಂದಿನ ಬಾಲಿವುಡ್ ಚಿತ್ರ ‘ಉರಿ’ ಬಗ್ಗೆ ಅಪಾರ ನಿರೀಕ್ಷೆಯಿಟ್ಟುಕೊಂಡಿದ್ದಾರೆ. ಉರಿ ತನ್ನ ಸಿನೆಮಾ ಬದುಕಿನಲ್ಲೇ ಒಂದು ವಿಶಿಷ್ಟ ಚಿತ್ರವೆನಿಸಲಿದೆಯೆಂದಾಕೆ ಹೇಳಿಕೊಂಡಿದ್ದಾರೆ.
ಚಿತ್ರದ ನಿರ್ದೇಶಕ ಹಾಗೂ ಕಥೆಗಾರ ಆದಿತ್ಯಧರ್ ಹಾಗೂ ನಾಯಕ ನಟ ವಿಕಿ ಕೌಶಲ್ ಸೇರಿದಂತೆ ಇಡೀ ಚಿತ್ರತಂಡ ಈ ಚಿತ್ರಕ್ಕಾಗಿ ಅಪಾರ ಶ್ರಮಪಟ್ಟಿದೆ ಎಂದು ಯಾಮಿ ಹೇಳಿದ್ದಾರೆ. ಭಾರತೀಯ ಸೇನೆಯ ರೋಚಕ ಕಥೆಯನ್ನು ಹೇಳುವ ಪ್ರತಿಯೊಬ್ಬ ಭಾರತೀಯನೂ ವೀಕ್ಷಿಸಬೇಕೆಂದು ಯಾಮಿ ಪ್ರತಿಪಾದಿಸಿದ್ದಾರೆ.
ಈ ಚಿತ್ರದಲ್ಲಿ ವಿಕಿಕೌಶಲ್, 2016ರ ಸರ್ಜಿಕಲ್ ದಾಳಿಯಲ್ಲಿ ಭಾಗವಹಿಸಿದ್ದ ಭಾರತೀಯ ಕಮಾಂಡೋ ಒಬ್ಬನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕೀರ್ತಿ ಕುಲ್ಹರಿ ಹಾಗೂ ಪರೇಶ್ ರಾವ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಆರ್ಎಸ್ವಿಪಿ ಬ್ಯಾನರ್ನಡಿಯಲ್ಲಿ ನಿರ್ಮಾಣ ಗೊಂಡಿರುವ ಈ ಚಿತ್ರವು ಮುಂದಿನ ವರ್ಷದ ಜನವರಿ 11ರಂದು ತೆರೆಕಾಣಲಿದೆ.
Next Story