ಮುಂದಿನ ಜೇಮ್ಸ್ ಬಾಂಡ್ ಆಗಲಿದ್ದಾರೆಯೇ ಇದ್ರೀಸ್ ?
ಸ್ಪರ್ಧೆಯಲ್ಲಿದ್ದಾರೆ ಘಟಾನುಘಟಿಗಳು
ಲಂಡನ್, ಸೆ. 1 : ಮುಂದಿನ ಜೇಮ್ಸ್ ಬಾಂಡ್ ಆಗುವವರ ಪಟ್ಟಿಯಲ್ಲಿ ಖ್ಯಾತ ನಟ ಇದ್ರೀಸ್ ಎಲ್ಬ ಮುಂಚೂಣಿಯಲ್ಲಿದ್ದಾರೆ ಎಂದು ಚಿತ್ರ ನಿರ್ಮಾಪಕ ಸಂಸ್ಥೆ ಎಂಜಿಎಂ ನ ಅಧಿಕೃತ ಪ್ರಕಟಣೆ ತಿಳಿಸಿದೆ. ಸದ್ಯ ಬಾಂಡ್ ಆಗಿರುವ ಡೇನಿಯಲ್ ಕ್ರೇಗ್ ಇನ್ನು ಮುಂದಿನ ಸರಣಿಗೆ ತಾನು ಲಭ್ಯವಿಲ್ಲ ಎಂದು ಹೇಳಿರುವುದರಿಂದ ಹೊಸ ಮುಖವನ್ನು ನಿರ್ಮಾಣ ಸಂಸ್ಥೆ ಅರಸುತ್ತಿದೆ.
" ಡೇನಿಯಲ್ ಅವರ ಸ್ಥಾನ ತುಂಬುವುದು ನಿಜಕ್ಕೂ ಸವಾಲಿನ ಕೆಲಸ. ಆದರೆ ಇದ್ರೀಸ್ ಅವರು ಈಗಾಗಲೇ ತಮ್ಮ ಪ್ರತಿಭೆಯನ್ನು ಸಾಬೀತು ಪಡಿಸಿರುವ ನಟ. ಅವರಿಗೆ ವಯಸ್ಸು ಹೆಚ್ಚಾಗಿದ್ದರೂ ಈಗಲೂ ಅವರು ಮೂವತ್ತರ ಯುವಕನಂತೆ ಕಾಣುತ್ತಾರೆ " ಎಂದು ಮೂಲವೊಂದು ಹೇಳಿದೆ.
ಏಡನ್ ಟರ್ನರ್ , ಲೂಕ್ ಇವಾನ್ಸ್ ಹಾಗು ಟಾಮ್ ಹಿಡ್ಲ್ ಸ್ಟನ್ ಸ್ಪರ್ಧೆಯಲ್ಲಿರುವ ಇತರ ನಟರು.
ಇತ್ತೀಚಿಗೆ ಖ್ಯಾತ ಹಾಲಿವುಡ್ ನಿರ್ದೇಶಕ ಸ್ಟೀವನ್ ಸ್ಪೀಲ್ ಬರ್ಗ್ ಅವರು ಜೇಮ್ಸ್ ಬಾಂಡ್ ಪಾತ್ರಕ್ಕೆ ಇದ್ರೀಸ್ ಎಲ್ಬ ನನ್ನ ಮೊದಲ ಆಯ್ಕೆ ಎಂದು ಹೇಳಿದ್ದು ಇಲ್ಲಿ ಗಮನಾರ್ಹ .
Next Story