ಮುಂದಿನ ವಾರದಿಂದ ಸ್ಯಾಂಡಲ್ ವುಡ್ ನಲ್ಲಿ ಗಣೇಶ್ "ಪಟಾಕಿ"
ಬೆಂಗಳೂರು, ಮೇ 18: ಗೋಲ್ಡನ್ ಸ್ಟಾರ್ ಖ್ಯಾತಿಯ ಮಳೆ ಹುಡುಗ ಗಣೇಶ್ ಅವರ ಹೊಸ ಚಿತ್ರ ‘ಪಟಾಕಿ’ ಮುಂದಿನ ವಾರ ತೆರೆಕಾಣಲಿದೆ. 'ಮುಗುಳುನಗೆ', ‘ಚಮಕ್’ ಸೇರಿದಂತೆ ಹಲವಾರು ಚಿತ್ರಗಳ ನಿರ್ಮಾಣದಲ್ಲಿ ಬ್ಯುಸಿಯಾಗಿರುವಂತೆಯೇ ಗಣೇಶ್ ಅವರ "ಪಟಾಕಿ" ತೆರೆಗೆ ಬರಲು ಸಿದ್ಧವಾಗಿದ್ದು, ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫೀಕೇಟ್ ಪಡೆದುಕೊಂಡಿದೆ.
ಈ ವಾರಾಂತ್ಯ ಶಿವರಾಜ್ ಕುಮಾರ್ ಅಭಿನಯದ ‘ಬಂಗಾರ ಸನ್ ಅಫ್ ಬಂಗಾರದ ಮನುಷ್ಯ’ ಚಿತ್ರದ ಬಿಡುಗಡೆ ಹಿನ್ನೆಲೆಯಲ್ಲಿ "ಪಟಾಕಿ" ಬಿಡುಗಡೆಯನ್ನು ನಂತರದ ವಾರಕ್ಕೆ ಚಿತ್ರತಂಡ ನಿಗದಿಪಡಿಸಿದೆ.
ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ರಮ್ಯಾ ರಾವ್, ಸಾಯಿ ಕುಮಾರ್, ಪ್ರಿಯಾಂಕಾ, ಸಾಧುಕೋಕಿಲ, ಮೊದಲಾದವರು ತಾರಾಗಣದಲ್ಲಿದ್ದಾರೆ. ಖಾಕಿಧಾರಿಯಾಗಿ ಗೋಲ್ಡನ್ ಸ್ಟಾರ್ ಗಣೇಶ್ ‘ಪಟಾಕಿ’ ಚಿತ್ರದಲ್ಲಿ ಮಿಂಚಿದ್ದಾರೆ. ಈ ಚಿತ್ರ ತೆಲುಗಿನ "ಪಟ್ಟಾಸ್" ಚಿತ್ರದ ರಿಮೇಕ್ ಆಗಿದೆ.
Next Story