ನಟಿಯ ಅಪಹರಣ ಪ್ರಕರಣ: ಮಲಯಾಳಂ ನಟ ದಿಲೀಪ್ ಬಂಧನ
ಹೊಸದಿಲ್ಲಿ, ಜು.10: ನಟಿಯ ಅಪಹರಣ ಹಾಗೂ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿ ಘಟನೆಗೆ ಪಿತೂರಿ ನಡೆಸಿದ್ದಾರೆ ಎನ್ನುವ ಆರೋಪದಲ್ಲಿ ಮಲಯಾಳಂ ನಟ ದಿಲೀಪ್ ರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಕಳೆದ ವಾರ ನಟ ದಿಲೀಪ್ ಹಾಗೂ ನಿರ್ದೇಶಕ ನಾದಿರ್ ಶಾರನ್ನು ಸುಮಾರು 13 ಗಂಟೆಗಳ ಕಾಲ ಪೊಲೀಸರು ವಿಚಾರಣೆ ನಡೆಸಿದ್ದರು. ಇದರ ನಂತರ ದಿಲೀಪ್ ಪತ್ನಿ, ನಟಿ ಕಾವ್ಯಾ ಮಾಧವನ್ ರ ಮಳಿಗೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದರು.
ಸೋಮವಾರ ಬೆಳಗ್ಗೆ ದಿಲೀಪ್ ರನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದ್ದು, ಸಂಜೆ ಬಂಧಿಸಲಾಗಿದೆ.
Next Story