ಇನ್ನು ಸೌದಿ ಟ್ರಾವೆಲ್ ಏಜನ್ಸಿಗಳಿಂದ ವೀಸಾ
ಜಿದ್ದಾ (ಸೌದಿ ಅರೇಬಿಯ), ಡಿ. 5: ಇನ್ನು ಮುಂದೆ ‘ಡಿ’ ದರ್ಜೆಯ ಟ್ರಾವೆಲ್ ಏಜನ್ಸಿಗಳು ಪ್ರವಾಸಿಗರಿಗೆ ಮತ್ತು ಶೈಕ್ಷಣಿಕ ಅಥವಾ ವೈದ್ಯಕೀಯ ಉದ್ದೇಶಗಳಿಗಾಗಿ ಸೌದಿ ಅರೇಬಿಯದ ಒಳಗೆ ಮತ್ತು ಹೊರಗೆ ವೀಸಾಗಳನ್ನು ನೀಡಬಹುದಾಗಿದೆ.
ಇಂಥ ವೀಸಾಗಳನ್ನು ನೀಡಲು ‘ಡಿ’ ಕೆಟಗರಿಯ ಟ್ರಾವೆಲ್ ಏಜನ್ಸಿಯೊಂದಕ್ಕೆ ಜಿದ್ದಾದಲ್ಲಿರುವ ಸೌದಿ ಪ್ರವಾಸೋದ್ಯಮ ಮತ್ತು ರಾಷ್ಟ್ರೀಯ ಪರಂಪರೆ ಆಯೋಗ (ಎಸ್ಸಿಟಿಎಚ್) ಮೊದಲ ಪರವಾನಿಗೆ ನೀಡಿದೆ ಎಂದು ‘ಸಬ್ಕ್ ಆನ್ಲೈನ್’ ಪತ್ರಿಕೆ ವರದಿ ಮಾಡಿದೆ.
Next Story