ಕುವೈತ್: ಬಾಲ್ಕನಿಯಲ್ಲಿ ಬಟ್ಟೆ ನೇತಾಡಿಸುವವರಿಗೆ ಭಾರೀ ದಂಡ
ಸಾಂದರ್ಭಿಕ ಚಿತ್ರ
ಕುವೈತ್, ಎ. 11: ಕುವೈತ್ನ ನೂತನ ನಿಯಮಗಳನ್ವಯ, ಮನೆಗಳ ಬಾಲ್ಕನಿಗಳಲ್ಲಿ ಬಟ್ಟೆಗಳನ್ನು ನೇತಾಡಿಸುವವರಿಗೆ 300 ಕುವೈತ್ ದೀನಾರ್ (65,300 ರೂಪಾಯಿ)ವರೆಗೆ ದಂಡ ವಿಧಿಸಬೇಕೆನ್ನುವ ಅಭಿಯಾನವೊಂದು ಆರಂಭಗೊಂಡಿದೆ.
ಆರೋಗ್ಯ ಕಾಳಜಿ ಮತ್ತು ದೃಶ್ಯ ಮಾಲಿನ್ಯಗಳ ಹಿನ್ನೆಲೆಯಲ್ಲಿ ಈ ಅಭಿಯಾನ ಆರಂಭಗೊಂಡಿದೆ ಎಂದು ಕ್ಸಿನುವ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕುವೈತ್ನಲ್ಲಿ ತುಂಬಾ ಹಿಂದಿನಿಂದಲೂ ಈ ಅಭಿಯಾನ ಜಾರಿಯಲ್ಲಿದೆ ಎಂದು ಅಭಿಯಾನ ತಂಡದ ಮುಖ್ಯಸ್ಥ ಝೈದ್ ಅಲ್ ಎನೆಝಿ ಹೇಳುತ್ತಾರೆ.
Next Story