ಯುಎಇಯಲ್ಲಿ ಪ್ರಬಲ ಗಾಳಿ, ಸಮುದ್ರ ಪ್ರಕ್ಷುಬ್ಧ
ದುಬೈ, ಜೂ. 16: ಯುಎಇಯಲ್ಲಿ ಬಲವಾದ ಗಾಳಿ ಬೀಸುವುದು ಮುಂದುವರಿಯುತ್ತದೆ ಹಾಗೂ ಸಮುದ್ರ ಪ್ರಕ್ಷುಬ್ಧವಾಗಿರುತ್ತದೆ ಎಂದು ರಾಷ್ಟ್ರೀಯ ಹವಾಮಾನ ಕೇಂದ್ರ ಮುನ್ನೆಚ್ಚರಿಕೆ ನೀಡಿದೆ. ರವಿವಾರದವರೆಗೆ 8 ಅಡಿವರೆಗಿನ ತೆರೆಗಳು ಅರೇಬಿಯನ್ ಕೊಲ್ಲಿಯ ತೀರವನ್ನು ಅಪ್ಪಳಿಸಲಿವೆ.
ಕರಾವಳಿ ತೀರದಲ್ಲಿ ಉಷ್ಣತೆಯು 37 ಮತ್ತು 42 ಡಿಗ್ರಿ ಸೆಲ್ಸಿಯಸ್ ನಡುವೆ ಇರುತ್ತದೆ ಹಾಗೂ ಒಳ ಪ್ರದೇಶಗಳಲ್ಲಿ 41 ಮತ್ತು 45 ಡಿಗ್ರಿ ಸೆಲ್ಸಿಯಸ್ ನಡುವೆ ಇರುತ್ತದೆ ಎಂದು ಹವಾಮಾನ ಕೇಂದ್ರ ತಿಳಿಸಿದೆ.
Next Story