ದುಬೈ: ತುರ್ತು ವಾಹನಗಳಿಗೆ ದಾರಿ ನೀಡದಿದ್ದರೆ ಬೆಲೆ ತೆರಲು ಸಿದ್ಧರಾಗಿ!
ದುಬೈ, ಸೆ. 1: ದುಬೈಯಲ್ಲಿ ತುರ್ತು ಸೇವೆಯ ವಾಹನಗಳಿಗೆ ದಾರಿ ನೀಡದ ವಾಹನಗಳ ಮಾಲೀಕರಿಗೆ 1,000 ದಿರ್ಹಮ್ (ಸುಮಾರು 19,290 ರೂಪಾಯಿ) ದಂಡ ವಿಧಿಸಲಾಗುತ್ತದೆ ಹಾಗೂ ಅವರಿಗೆ 6 ಕಪ್ಪು ಅಂಕಗಳನ್ನು ನೀಡಲಾಗುತ್ತದೆ.
ತುರ್ತು ವಾಹನಗಳಿಗೆ ದಾರಿ ನೀಡಿ, ಇಲ್ಲದಿದ್ದರೆ ದಂಡ ಎದುರಿಸಿ ಎಂಬುದಾಗಿ ಟ್ವಿಟರ್ ಸಂದೇಶವೊಂದರಲ್ಲಿ ದುಬೈ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
Next Story