ಇಂದು ಸಂಜೆ ಜುಬೈಲ್ ನಲ್ಲಿ ಎಮಿರೇಟ್ಸ್ ಖಾದರ್ ಅಂತಿಮ ಸಂಸ್ಕಾರ
ದಮಾಮ್, ಡಿ. 10: ಡಿಸೆಂಬರ್ 6ರಂದು ಮುಂಜಾನೆ ಸೌದಿ ಅರೇಬಿಯಾದ ದಮಾಮ್ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಖ್ಯಾತ ಸಮಾಜ ಸೇವಕ ಕೆ.ಅಬ್ದುಲ್ ಖಾದರ್ (ಎಮಿರೇಟ್ಸ್ ಖಾದರ್) ಹಾಗೂ ಅವರ ಪತ್ನಿಯ ತಂದೆ ಎಂ.ಕೆ.ಅಬ್ದುಲ್ ಖಾದರ್ ಬಾವಾ (ಬಸರಿಕಟ್ಟೆ ಎಸ್. ಕೋಡಿ ಬಾವಾಕ) ಅವರ ಜನಾಝ ನಮಾಝ್ ಹಾಗೂ ಅಂತಿಮ ಸಂಸ್ಕಾರ ಸೋಮವಾರ (ಡಿಸೆಂಬರ್ 10) ಅಸರ್ ನಮಾಝ್ ಬಳಿಕ ಜುಬೈಲ್ ನ ಒಮರ್ ಬಿನ್ ಅಬ್ದುಲ್ ಅಝೀಝ್ ಮಸೀದಿಯ ವಠಾರದಲ್ಲಿ ನೆರವೇರಲಿದೆ. ದಮಾಮ್ ರಿಯಾದ್ ರಸ್ತೆಯಲ್ಲಿರುವ ಆಸ್ಪತ್ರೆಯೊಂದರಿಂದ ಮಧ್ಯಾಹ್ನ ಒಂದು ಗಂಟೆಗೆ ಪಾರ್ಥಿವ ಶರೀರಗಳು ಜುಬೈಲ್ ತಲುಪಲಿವೆ ಎಂದು ಪ್ರಕಟನೆಯೊಂದು ತಿಳಿಸಿದೆ.
Next Story