ದುಬೈ: ಡಿ.14ರಂದು ಅನಿವಾಸಿ ಸಂಘಟನೆಗಳ ನೇತೃತ್ವ ರಕ್ತದಾನ ಶಿಬಿರ
ದುಬೈ, ಡಿ. 12: ಕರ್ನಾಟಕ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್ ದುಬೈ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಇದರ ವತಿಯಿಂದ ದುಬೈ ಹೆಲ್ತ್ ಅಥೋರಿಟಿ ಆ್ಯಂಡ್ ಕಮ್ಯುನಿಟಿ ಡೆವಲಪ್ಮೆಂಟ್ ಇದರ ಸಹಯೋಗದೊಂದಿಗೆ ಡಿ.14ರಂದು ಬೆಳಗ್ಗೆ 9.30ಕ್ಕೆ ದುಬೈ ಲತೀಫಾ ಆಸ್ಪತ್ರೆಯಲ್ಲಿ ಸಾರ್ವಜನಿಕ ರಕ್ತದನಾ ಶಿಬಿರ ನಡೆಯಲಿದೆ.
ಅನಿವಾಸಿ ಭಾರತೀಯರು ಸೇರಿ ನಡೆಸುವ ಪ್ರವಾಸಿ ರಕ್ತದಾನ ಶಿಬಿರದಲ್ಲಿ ಹಲವು ಸ್ಥಳೀಯ ಮುಂದಾಳುಗಳು ಭಾಗವಹಿಸಲಿದ್ದಾರೆ. ವಿದೇಶಿ ಪ್ರವಾಸಿಗರು ಮತ್ತು ಸ್ಥಳೀಯ ನಾಗರಿಕರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದಾಗ ಉಂಟಾಗುವ ರಕ್ತದ ಕೊರತೆ ನೀಗಿಸಲು ಈ ರೀತಿಯ ಕಾರ್ಯಕ್ರಮ ನಡೆಸುವುದಾಗಿದ್ದು, ದುಬೈಯಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ರಕ್ತದಾನ ಶಿಬಿರದಲ್ಲಿ ಭಾಗವಹಿಸಬೇಕಾಗಿ ಸಂಘಟಕರು ತಿಳಿಸಿದ್ದಾರೆ.
Next Story