ಯುಇಎ: ಹಕ್ಕಿಗೂಡಲ್ಲಿ ಏಶ್ಯನ್ನರ ಬಂಧಿಸಿದವನ ಸೆರೆ
ದುಬೈ, ಜ. 11: ಏಶ್ಯ ಖಂಡದ ಹಲವು ವಲಸಿಗರನ್ನು ಹಕ್ಕಿ ಗೂಡೊಂದರಲ್ಲಿ ಬಂಧನದಲ್ಲಿಟ್ಟಿದ್ದ ವ್ಯಕ್ತಿಯನ್ನು ಬಂಧಿಸಿರುವುದಾಗಿ ಯುಎಇ ಅಟಾರ್ನಿ ಜನರಲ್ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯೊಂದು ತಿಳಿಸಿದೆ.
ಈ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು.
‘‘ಹಲವಾರು ಏಶ್ಯನ್ನರನ್ನು ಹಕ್ಕಿ ಗೂಡೊಂದರಲ್ಲಿ ವ್ಯಕ್ತಿಯೊಬ್ಬ ಬಂಧಿಸಿಟ್ಟಿರುವುದನ್ನು ವೀಡಿಯೊ ತೋರಿಸಿತ್ತು. ಎಎಫ್ಸಿ ಏಶ್ಯನ್ ಕಪ್ ಫುಟ್ಬಾಲ್ ಪಂದ್ಯಾವಳಿಯ ಯುಎಇ-ಭಾರತ ಪಂದ್ಯದಲ್ಲಿ ಯುಎಇ ಪರವಾಗಿ ಜೈಕಾರ ಹಾಕುವಂತೆ ಅವರ ಮೇಲೆ ಒತ್ತಡ ಹೇರಲಾಗಿತ್ತು’’ ಎಂದು ಹೇಳಿಕೆ ತಿಳಿಸಿದೆ.
‘‘ಈ ವೀಡಿಯೊ ಮಾಡಿದ ವ್ಯಕ್ತಿಯ ವಿರುದ್ಧ ವಾರಂಟ್ ಹೊರಡಿಸಲಾಗಿದೆ ಹಾಗೂ ಅವನನ್ನು ಬಂಧಿಸಿ ವಿಚಾರಣೆಗೆ ಗುರಿಪಡಿಸಲಾಗಿದೆ’’ ಎಂದು ಅದು ಹೇಳಿದೆ.
شاهد: إماراتي يحبس هنود في أقفاص لإجبارهم على تشجيع منتخب بلاده !https://t.co/fI2GHzDylJ pic.twitter.com/PvpxUnJx6m
— مزمز فيديو (@mzmzvideo) January 10, 2019
Next Story