ಯೆಮನ್ ಮೇಲಿನ ವಾಯುದಾಳಿ: 7 ಮಕ್ಕಳು, 2 ಮಹಿಳೆಯರು ಮೃತ್ಯು
ದುಬೈ (ಯುಎಇ), ಜು. 14: ವಾಯುವ್ಯ ಯೆಮನ್ ಮೇಲೆ ನಡೆದ ವಾಯು ದಾಳಿಯಲ್ಲಿ ಏಳು ಮಕ್ಕಳು ಮತ್ತು ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ ಸೋಮವಾರ ತಿಳಿಸಿದೆ. ಅದೇ ವೇಳೆ, ಯೆಮನ್ ನ ಹೌದಿ ಬಂಡುಕೋರರು ಉಡಾಯಿಸಿದ ಕ್ಷಿಪಣಿಗಳನ್ನು ತುಂಡರಿಸಿರುವುದಾಗಿ ಸೌದಿ ಅರೇಬಿಯ ಹೇಳಿದೆ.
ಹಜ್ಜಾ ರಾಜ್ಯದ ಮೇಲೆ ಸೋಮವಾರ ನಡೆದ ದಾಳಿಯಲ್ಲಿ ಇಬ್ಬರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ ಎಂಬುದಾಗಿಯೂ ಸಮನ್ವಯ ಕಚೇರಿ ಹೇಳಿದೆ.
‘‘ಕೋವಿಡ್-19 ಸಾಂಕ್ರಾಮಿಕದ ನಡುವಿನಲ್ಲಿ, ಯುದ್ಧವಿರಾಮದ ಆಯ್ಕೆಗಳು ಇರುವಾಗ ಯೆಮನ್ ನಲ್ಲಿ ನಾಗರಿಕರ ಸಾವುಗಳು ಮುಂದುವರಿಯುತ್ತಿರುವುದನ್ನು ಅರ್ಥಮಾಡಿಕೊಳ್ಳಲು ಆಗುತ್ತಿಲ್ಲ’’ ಎಂದು ಕಚೇರಿಯ ಸಮನ್ವಯಾಧಿಕಾರಿ ಲೀಸಾ ಗ್ರಾಂಡ್ ಹೇಳಿದ್ದಾರೆ.
Next Story