ಅಬುಧಾಬಿ: ಲಿವ ಖರ್ಜೂರ ಉತ್ಸವ
ಅಬುಧಾಬಿ,ಜುಲೈ 20: ಲಿವ ಖರ್ಜೂರ ಉತ್ಸವ ಬುಧವಾರ ಆರಂಭವಾಗಲಿದ್ದು ಕಳೆದ ಹನ್ನೆರಡು ವರ್ಷಗಳಿಂದ ಲಿವದಲ್ಲಿ ಖರ್ಜೂರ ಪ್ರದರ್ಶನ ಮತ್ತು ಮಾರಾಟ ಉತ್ಸವ ಏರ್ಪಡಿಸಲಾಗುತ್ತಿದೆ ಎಂದು ವರದಿಯಾಗಿದೆ. ಜುಲೈ 30ರವರೆಗೆ ನಡೆಯಲಿರುವ ಉತ್ಸವದಲ್ಲಿ 70,000 ಮಂದಿ ಭಾಗವಹಿಸುವ ನಿರೀಕ್ಷೆಯನ್ನು ಸಂಘಟಕರು ವ್ಯಕ್ತಪಡಿಸಿದ್ದಾರೆಂದು ವರದಿ ತಿಳಿಸಿದೆ.
20,000 ಚದರ ಮೀಟರ್ ಜಾಗವನ್ನು ಉತ್ಸವಕ್ಕಾಗಿ ಮೀಸಲಿಡಲಾಗಿದ್ದು ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುವುದು. ಖರ್ಜೂರದ ಸೌಂದರ್ಯ ಸ್ಪರ್ಧೆ, ಮಾವು ಸ್ಪರ್ಧೆ, ಲಿಂಬೆಹುಳಿ ಸ್ಪರ್ಧೆ, ಬಾಳೆಹಣ್ಣು ಸ್ಪರ್ಧೆ, ಮಾದರಿ ಕೃಷಿ ಸ್ಥಳಕ್ಕೆ ಪ್ರಶಸ್ತಿ, ಫೋಟೊಗ್ರಫಿ ಸ್ಪರ್ಧೆ ಮುಂತಾದುವು ನಡೆಯಲಿದೆ ಎಂದುತಿಳಿದು ಬಂದಿದೆ. ಇನ್ಸ್ಸ್ಟಾಗ್ರಾಂ ಮೂಲಕ ಫೋಟೊ ಸ್ಪರ್ಧೆಯನ್ನು ಆಯೋಜಿಸಲಾಗುವುದು ಎಂದು ವರದಿಯಾಗಿದೆ.
Next Story