ದುಬೈಯಲ್ಲಿ ನವೆಂಬರ್ 25 ರಂದು "Ahlan UAE" 2016 ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಿರುವ KSCC
ದುಬೈ,ಅ.21: ಕರ್ನಾಟಕ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್(ರಿ)-KSCC ಯು ಏ ಇ, ವತಿಯಿಂದ ಆಯೋಜಿಸಲಿರುವ "Ahlan UAE" 2016 ನವೆಂಬರ್ 25 ರಂದು ದುಬೈ ಅಲ್ ಕುಸೈಸ್ ಕ್ರೆಸೆಂಟ್ ಇಂಗ್ಲೀಷ್ ಸ್ಕೂಲ್ ನಲ್ಲಿ ನಡೆಯಲಿದೆ.
ಅನಿವಾಸಿ ಭಾರತೀಯ ಕುಟುಂಬಗಳಿಗೋಸ್ಕರ "Ahlan UAE" 2016, "let's make memories together "ಎಂಬ ಶೀರ್ಷಿಕೆಯಲ್ಲಿ ಸಂಯೋಜಿಸಿರುವ ಈ ಕಾರ್ಯಕ್ರಮದಲ್ಲಿ ರಸಪ್ರಶ್ನೆ, ಚಿತ್ರ ಬಿಡಿಸುವಿಕೆ , ಗಾಯನ ಸ್ಪರ್ಧೆಗಳು,ಸ್ವಾದಿಷ್ಟ ಅಡುಗೆ, ಚದುರಂಗ, ಛದ್ಮವೇಷ, ಮದುರಂಗಿ ಹಾಗು ಇನ್ನಿತರ ಹಲವಾರು ಮನರಂಜನಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ
ಕಾರ್ಯಕ್ರಮದಲ್ಲಿ ಭಾರತದ ಹಲವು ರಾಜ್ಯಗಳ ಸಾಂಪ್ರದಾಯಿಕ ವೇಷಭೂಷಣ ಸ್ಪರ್ಧೆಯು ಎಲ್ಲರ ಗಮನ ಸೆಳೆಯಲಿದ್ದು ಇತಿಹಾಸವನ್ನು ನಿರ್ಮಿಸಲಿದೆ.
ಈ ಕಾರ್ಯಕ್ರಮದ ಲಾಂಛನ ಮತ್ತು ಆಮಂತ್ರಣ ಪತ್ರಿಕೆಯನ್ನು ಈಗಾಗಲೇ ಬಿಡುಗಡೆ ಗೊಳಿಸಲಾಗಿದ್ದು ಕಾರ್ಯಕ್ರಮದಲ್ಲಿ ಭಾಗವಹಿಸುವವರು ಸಾಮಾಜಿಕ ತಾಣಗಳಾದ ಫೇಸ್ಬುಕ್ , ವಾಟ್ಸಾಪ್ ಮುಖಾಂತರ ನೊಂದಾವಣೆ ಮಾಡಿಕೊಳ್ಳಬಹುದು ಅಲ್ಲದೇ
ದೂರವಾಣಿ ಕರೆಯ ಮುಖಾಂತರವೂ ತಮ್ಮ ನೋಂದಾವಣಿಯನ್ನು ಖಚಿತಪಡಿಸಿಕೊಳ್ಳಬಹುದಾಗಿದೆ. ಪ್ರಥಮವಾಗಿ ನೊಂದಾವಣೆ ಮಾಡಿಕೊಂಡ ಕುಟುಂಬಗಳಿಗೆ ಪ್ರಾಶಸ್ತ್ಯವನ್ನು ನೀಡಲಾಗುವುದು
ದೂರವಾಣಿ ಸಂಖ್ಯೆ: 055 546 5224, 055 534 8230
ಚಿಣ್ಣರ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸುವ ಪುಟಾಣಿಗಳ ಆಯ್ಕೆ ಪ್ರಕ್ರಿಯೆಯು ಈಗಾಗಲೇ ಫ್ರಾರಂಭ ವಾಗಿದ್ದು ಭಾಗವಹಿಸುವ ಪುಟಾಣಿಗಳ 2 ನಿಮಿಷಗಳ ಗಾಯನದ(ದೇಶಭಕ್ತಿ ಗೀತೆ) ವೀಡಿಯೋ ರೆಕಾರ್ಡಿಂಗನ್ನು ವಾಟ್ಸಾಪ್ ಸಂಖ್ಯೆ : 0555971237 ಗೆ ಕಳುಹಿಸಬಹುದೆಂದೂ ಅಂತಿಮ ಹಂತದ ಸ್ಪರ್ಧಿಗಳನ್ನು ಪರಿಣತ ತೀರ್ಪುಗಾರರು ಆಯ್ಕೆ ಮಾಡಲಿದ್ದಾರೆ ಎಂದು ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.